ಅಮಿತ್ ಶಾ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ

Prasthutha|

ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವು ಅಸ್ಸಾಂ ನ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

- Advertisement -


ತ್ರಿಪುರಾದ ಅಗರ್ತಲಾಗೆ ಭೇಟಿ ನೀಡಲು ಹೊರಟಿದ್ದ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಅಗರ್ತಲಾದಲ್ಲಿ ಇಳಿಯಲು ಸಾಧ್ಯವಾಗದೆ ಹಠಾತ್ತನೆ ಗುವಾಹಟಿಗೆ ಆಗಮಿಸಿ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

ಹೋಟೆಲ್ ರಾಡಿಸನ್ ಬ್ಲೂನಲ್ಲಿ ಅಮಿತ್ ಶಾ ಅವರು ರಾತ್ರಿ ಕಳೆದಿದ್ದು, ಬೆಳಗ್ಗೆ ಗುವಾಹಟಿಯಿಂದ ಅಗರ್ತಲಾಗೆ ತೆರಳಿದ್ದಾರೆ.

Join Whatsapp