ಮಾಧ್ಯಮಗಳ ಪಿಎಫ್ ಐ ನಿಷೇಧ ಸುದ್ದಿಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವಾಲಯ

Prasthutha|

ನವದೆಹಲಿ: ಮುಂದಿನ ವಾರ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಂಘಟನೆಯನ್ನು ಕೇಂದ್ರ ಸರಕಾರ ಬ್ಯಾನ್ ಮಾಡಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ರಾಜ್ಯದ ಖಾಸಗಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಆದರೆ ಈ ಸುದ್ದಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಳ್ಳಿ ಹಾಕಿದ್ದು ಪಿಎಫ್ ಐ ಬ್ಯಾನ್ ಚರ್ಚೆಯೇ ನಡೆದಿಲ್ಲ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

- Advertisement -

ಪಿಎಫ್ಐ ಅನ್ನು ನಿಷೇಧಿಸುವ ಸಭೆಯ ಬಗ್ಗೆ ಮಾಧ್ಯಮ ವರದಿಗಳು ಸರಿಯಾಗಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ. ಅಲ್ಲದೇ ಇಂದು ಅಂತಹ ಯಾವುದೇ ಸಭೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಮನವಮಿ ವೇಳೆ ಉಂಟಾದ ಹಿಂಸಾಚಾರದಲ್ಲಿ ಪಿಎಫ್ ಐ ಭಾಗಿಯಾಗಿದೆ ಎಂದು ಕೆಲ ಮಾಧ್ಯಮಗಳು ಸುಳ್ಳಾರೋಪ ಹೊರಿಸಿ , ಮುಂದಿನ ವಾರದಲ್ಲಿ ಕೇಂದ್ರ ಸರಕಾರವು ಪಿಎಫ್ ಐ ಮೇಲೆ ನಿಷೇಧ ಹೇರಲಿದೆ ಎಂದು ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಗೃಹ ಸಚಿವಾಲಯ ಮಾಧ್ಯಮಗಳ ಸುಳ್ಳು ವರದಿಯನ್ನು ತಳ್ಳಿ ಹಾಕಿದೆ.

Join Whatsapp