ಪೆಟ್ರೋಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ: ನಿರಂತರ ಬೆಲೆಯೇರಿಕೆಯಿಂದಾಗಿ ತತ್ತರಿಸುವ ದೇಶದ ಜನತೆ

Prasthutha|

ನವದೆಹಲಿ: ದಿನಬಳಕೆ ಸಾಮಾಗ್ರಿಗಳ ಬೆಲೆಯೇರಿಕೆಯಿಂದ ದೇಶದ ಜನತೆ ತತ್ತರಿಸಿರುವ ಮಧ್ಯೆ ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿನಿತ್ಯ ಏರಿಸುತ್ತಲೇ ಸಾಗುತ್ತಿದೆ. ಇದರಿಂದಾಗಿ ಜನತೆ ಜೀವನ ಸಾಗಿಸಲು ಸಂಕಷ್ಟ ಎದುರಿಸುವಂತಾಗಿದೆ.

- Advertisement -

ಸತತ ಒಂದು ವಾರದಿಂದ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಇಂದು ಮತ್ತೆ 31 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಪೆಟ್ರೋಲ್ ಗೆ ಇಂದಿನ ದರ ಪ್ರತಿ ಲೀ.ಗೆ 110 ಮತ್ತು ಡೀಸೆಲ್ ಗೆ 101 ರೂಪಾಯಿ ಆದಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಮ್ ನ ಬೆಲೆ ಕಡಿಮೆಯಾಗಿದ್ದರೂ ಭಾರತದಲ್ಲಿ ನಿರಂತರ ಏರಿಕೆಯಾಗುತ್ತಿರುವುದು ಜನರನ್ನು ಕೆಂಗೆಡಿಸಿದೆ.

Join Whatsapp