► ಸಿಡಿ ಲೇಡಿಯ ವೀಡಿಯೋ ವೀಕ್ಷಿಸಿ
ಬೆಂಗಳೂರು : ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣದ ಸಿಡಿಯಲ್ಲಿರುವ ಯುವತಿಯ ಐದನೇ ವೀಡಿಯೋ ಇಂದು ಬಿಡುಗಡೆಗೊಳಿಸಿದ್ದು, ಅದರಲ್ಲಿ ತನ್ನ ತಂದೆ ತಾಯಿಗೆ ಏನೊಂದು ಗೊತ್ತಿಲ್ಲ. ಅವರನ್ನು ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ಹೇಳೀದ್ದಾಳೆ. ಈ ವೀಡಿಯೋ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಟಿಯ ಬಳಿಕ ಮತ್ತು ಆಕೆಯ ಪೋಷಕರನ್ನು ಇಂದು ಸಿಟ್ ತನಿಖಾ ತಂಡ ವಿಚಾರಣೆಗೊಳಪಡಿಸಿದ ಬಳಿಕ ಬಿಡುಗಡೆ ಮಾಡಿರುವ ದೃಶ್ಯಗಳಾಗಿದೆ.
ಈ ಹೊಸ ವೀಡಿಯೋದಲ್ಲಿ ಆಕೆ ನನ್ನ ಪೋಷಕರು ಅಮಾಯಕರು. ಅವರಿಂದ ಏನೇನೋ ಹೇಳಿಸಲಾಗಿದೆ ಎಂದು ದೂರಿದ್ದಾಳೆ. ಈಗ ಅನ್ಯಾಯ ಆಗಿರೋದು ನನಗೆ. ಆದರೆ ಪೊಲೀಸರು ಮಾತ್ರ ನನ್ನ ಮನೆಯವರನ್ನೇ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿದ್ದಾರೆ. ಅವರಿಂದ ಗೊತ್ತಿಲ್ಲದ ವಿಚಾರಗಳ ಕುರಿತು ಹೇಳಿಕೆ ಬಿಡುಗಡೆಗೊಳಿಸುತ್ತಿದ್ದಾರೆ. ನಾಳೆ ನಾನೂ ಇವರ ಮುಂದೆ ಬಂದು ಹೇಳಿಕೆ ಕೊಟ್ಟರೆ ನನಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ ಎಂದು ಆಕೆ ಹೇಳಿದ್ದಾಳೆ. ಆದುದರಿಂದ ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ನನಗೆ ಸಹಾಯ ಮಾಡಬೇಕು. ನಾನು ನೇರವಾಗಿ ನ್ಯಾಯಾಧೀಶರ ಮುಂದೆ ಬಂದು ಹೇಳಿಕೆ ಕೊಡುತ್ತೇನೆ ಎಂದು ಹೇಳಿದ್ದಾಳೆ.