‘ಸಾಯುವಾಗ ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯುತ್ತೇನೆ’ : ಸಿಡಿ ಲೇಡಿ ನಾಲ್ಕನೇ ವೀಡಿಯೋ ಬಹಿರಂಗ !

Prasthutha|

► ಹಣ ಬಲದಲ್ಲಿ ಜಾರಕಿಹೊಳಿ ಏನೂ ಮಾಡಬಲ್ಲರು !
► ನಾಲ್ಕನೇ ವೀಡಿಯೋ ವೀಕ್ಷಿಸಿ

- Advertisement -

ಬೆಂಗಳೂರು : ಸಿಡಿ ಲೇಡಿ ಅಜ್ಞಾತ ಸ್ಥಳದಿಂದಲೇ ತನ್ನ ನಾಲ್ಕನೇ ವೀಡಿಯೋ ಬಿಡುಗಡೆಗೊಳಿಸಿದ್ದು, ಅದರಲ್ಲಿ ನೇರವಾಗಿ ರಮೇಶ್ ಜಾರಕಿಹೊಳಿ ಮೇಲೆ ವಾಗ್ದಾಳಿ ನಡೆಸಿದ್ದಾಳೆ. ಜಾರಕಿಹೊಳಿ ಅವರು ತಮ್ಮ ಹಣಬಲದಿಂದ ಏನನ್ನು ಬೇಕಾದರೂ ಮಾಡಬಹುದು.  ಸರ್ಕಾರವನ್ನೇ ಬೀಳಿಸಿದ್ದೇನೆ ಎಂದರೆ ಅದರರ್ಥವೇನು? ಈಗ ನನ್ನ ಮೇಲಾಗುತ್ತಿರುವ ಮಾನಸಿಕ ಹಿಂಸೆಗೆ ಸಾಯಬೇಕು ಅನ್ನಿಸುತ್ತಿದೆ. ಹಾಗೊಂದು ವೇಳೆ ಸಾಯುವಾಗ ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದು ಸಾಯುತ್ತೇನೆ ಎಂದು ಆಕೆ ತನ್ನ ವೀಡಿಯೋದಲ್ಲಿ ಹೇಳಿದ್ದಾಳೆ.

ಹೊಸ ವೀಡಿಯೋದಲ್ಲಿ ಸಿಡಿ ಗ್ಯಾಂಗಿನ ಆರೋಪಿತ ನರೇಶ್ ಹೆಸರನ್ನು ಪ್ರಸ್ತಾಪಿಸಿದ್ದು, ಅವನ ಜೊತೆಗೆ ಕಾಂಗ್ರೆಸ್ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಬಳಿ ಹೋಗಿ ಮಾತನಾಡುವ ಕುರಿತು ಹೇಳಿದ್ದಾಳೆ. ಘಟನೆ ದೊಡ್ಡ ವಿಚಾರವಾಗಿದೆ, ಹೀಗಾಗಿ ಸಮಸ್ಯೆ ಪರಿಹಾರಕ್ಕಾಗಿ ರಾಜಕೀಯ ನಾಯಕರ ಬೆಂಬಲ ಬೇಕಾಗುತ್ತದೆ ಎಂದು ಆಕೆಯ ಗೆಳೆಯ ನರೇಶ್ ಹೇಳಿದ್ದ ಎಂದು ಯುವತಿ ಹೇಳಿದ್ದಾಳೆ. ಆದರೆ ಈ ನಾಯಕರನ್ನು ಭೇಟಿಯಾಗಿರುವ ಬಗ್ಗೆ ಮಾತ್ರ ವೀಡಿಯೋದಲ್ಲಿ ಉಲ್ಲೇಖಿಸಿಲ್ಲ.

- Advertisement -

ನಾನು ಎಸ್ ಐ ಟಿ ಮುಂದೆ ಹಾಜರಾಗಬೇಕೆಂದಿದ್ದರೆ ನನ್ನ ಕುಟುಂಬದವರಿಗೆ ರಕ್ಷಣೆ ನೀಡಬೇಕು. ನಾನು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕೆಂದರೆ ನನ್ನ ತಂದೆ, ತಾಯಿ, ನನ್ನ ತಮ್ಮಂದಿರು ಮತ್ತು ಅಜ್ಜಿ ನನ್ನ ಮುಂದೆ ಇರಲೇಬೇಕು ಎಂದು ತನ್ನ ವೀಡಿಯೋದಲ್ಲಿ ಹೇಳಿದ್ದಾಳೆ.

Join Whatsapp