ಹೋಟೆಲ್, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ: ತಪ್ಪಿದರೆ ದಂಡ

Prasthutha|

ಬೆಂಗಳೂರು: ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್, ಬಾರ್ & ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಿರಬೇಕು. ಇಲ್ಲದಿದ್ದರೆ ಮಾಲಕರಿಗೆ ದಂಡ ವಿಧಿಸುವುದರೊಂದಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ.

- Advertisement -

ಯಲಹಂಕ ಉಪನಗರದ ಡಾ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಾಸಿಕ ಜನ ಸಂಪರ್ಕ ದಿವಸ ಸಭೆಯಲ್ಲಿ ಮಾತನಾಡಿದ ಅವರು,
ಪಬ್ಲಿಕ್ ಸೇಫ್ಟಿ ಆಕ್ಟೃ ಪ್ರಕಾರ 100ಕ್ಕೂ ಹೆಚ್ಚು ಸಾರ್ವಜನಿಕರು ಬರುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಬೇಕು. ಇನ್ನು ಮುಂದಾದರೂ ಈ ನಿಯಮ ಜಾರಿಯಾಗಬೇಕು. ಮಾಲಕರು ಸಾರ್ವಜನಿಕರ ಮತ್ತು ಉದ್ಯೋಗಿಗಳ ಸುರಕ್ಷತೆಯ ಮತ್ತು ರಕ್ಷಣೆಯ ಕ್ರಮವನ್ನು ಕೈಗೊಳ್ಳಬೇಕು. ಸಿಸಿ ಕ್ಯಾಮರ ಅಳವಡಿಸುವ ವೇಳೆ ಪೊಲೀಸರ ಮಾರ್ಗದರ್ಶನ ಪಡೆಯಬೇಕು ಎಂದಯ ಹೇಳಿದರು.

ಇನ್‌ಸ್ಪೆಕ್ಟರ್‌ಗಳು ಸುರಕ್ಷತಾ ಕ್ರಮಗಳ ಬಗ್ಗೆ ಅಂಗಡಿ ಮಾಲೀಕರಿಗೆ ಸಲಹೆ ಸೂಚನೆ ನೀಡುತ್ತಾರೆ. ಇನ್‌ಸ್ಪೆಕ್ಟರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಭೇಟಿ ಕೊಟ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿದ್ದಾರೆಯೇ ಎಂದು ಪರಿಶೀಲನೆ ನಡೆಸಬೇಕು. ಒಂದು ವೇಳೆ ಇನ್‌ಸ್ಪೆಕ್ಟರ್‌ಗಳು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸದಿದ್ದರೆ ಎಸಿಪಿ ದರ್ಜೆಯ ಅಧಿಕಾರಿಗಳು ದಂಡವನ್ನು ವಿಧಿಸಬಹುದು. ಈಗಾಗಲೇ ನಗರದ ಕೆಲವು ಕಡೆ 5 ರಿಂದ 10 ಸಾವಿರ ರೂ.ವರೆ ದಂಡವನ್ನು ವಿಧಿಸಿದ್ದೇವೆ ಎಂದು ತಿಳಿಸಿದರು.



Join Whatsapp