ಬೆಂಗಳೂರು: ಶ್ರೀಮಂತರು, ಸೆಲೆಬ್ರಿಟಿಗಳಿಗೆ ಬ್ಲಾಕ್ ಮೇಲ್ ಮಾಡಿ ಹಣ ಪೀಕುತ್ತಿದ್ದ ವಂಚಕರು ರಾಜ್ಯದ ಸಚವರೊಬ್ಬರ ಪುತ್ರನಿಗೆ ವೀಡಿಯೋ ಕಳಿಸಿ 1ಕೋಟಿ ರೂ. ಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಹಕಾರ ಸಚಿವರ ಪುತ್ರನ ಬ್ಲಾಕ್ ಮೇಲ್ ಮಾಡಿದವರ ವಿರುದ್ಧ ನೀಡಿಲಾದ ದೂರಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಪುತ್ರ ನಿಶಾಂತ್ ಎಂಬುವರಿಗೆ ಎಡಿಟ್ ಮಾಡಿದ ಆಶ್ಲೀಲ ವೀಡಿಯೋ ಕಳುಹಿಸಿದ್ದರು. ವಾಟ್ಸಾಪ್ ಮೂಲಕ ಸಚಿವ ಎಸ್ ಟಿ ಸೋಮಶೇಖರ್, ಅವರ ಪಿಎ ಸೇರಿದಂತೆ ಸಚಿವರ ಪುತ್ರ ನಿಶಾಂತ್ ಗೂ ಕಳುಹಿಸಲಾಗಿತ್ತು. 1 ಕೋಟಿ ಹಣ ನೀಡದೇ ಇದ್ದರೇ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ, ಬ್ಲಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ದೂರು ಆಧರಿಸಿ ತನಿಖೆಗೆ ನಡೆಸಿದ ಪೊಲೀಸರು ದುಬೈನಿಂದ ಆಗಮಿಸುತ್ತಿದ್ದಂತೆ ಆರೋಪಿ ರಾಹುಲ್ ಭಟ್ ನನ್ನು ಬಂಧಿಸಿ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಐದು ದಿನ ತಮ್ಮ ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.