ಸಿಬಿಎಫ್’ಸಿ ವಿರುದ್ಧ ನಟ ವಿಶಾಲ್ ಭ್ರಷ್ಟಾಚಾರ ಆರೋಪ: ಸಿಬಿಐನಿಂದ FIR ದಾಖಲು

Prasthutha|

ನವದೆಹಲಿ: ತಮಿಳು ನಟ ವಿಶಾಲ್ ಅವರು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದರು. ತಮ್ಮ ‘ಮಾರ್ಕ್ ಆ್ಯಂಟೋನಿ’ ಸಿನಿಮಾದ ಹಿಂದಿ ಆವೃತ್ತಿಗೆ ಒಪ್ಪಿಗೆ ಪಡೆಯಲು ಸಿಬಿಎಫ್ ಸಿಗೆ 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದು ದೂರಿದ್ದರು. ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದ್ದು, ಮೂವರು ವ್ಯಕ್ತಿಗಳು ಮತ್ತು ಸಿಬಿಎಫ್ ಸಿನ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದೆ.

- Advertisement -


ತಮ್ಮ ಮಾರ್ಕ್ ಆ್ಯಂಟನಿ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಗೂ ಮುನ್ನ ಸಿಬಿಎಫ್ಸಿಯಿಂದ ಸೆನ್ಸಾರ್ ಪ್ರಮಾಣಪತ್ರ ಪಡೆಯಲು ₹6.5 ಲಕ್ಷ ಲಂಚ ನೀಡಿರುವುದಾಗಿ ತಮಿಳು ನಟ ವಿಶಾಲ್ ಹೇಳಿಕೊಂಡಿದ್ದರು. ವಿಡಿಯೊ ಸಂದೇಶ ಮೂಲಕ ಮಂಡಳಿ ವಿರುದ್ಧ ಅವರು ಹರಿಹಾಯ್ದಿದ್ದರು. ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ಪುರಾವೆಗಳನ್ನು ಹೊಂದಿರುವುದಾಗಿ ಅವರು ಹೇಳಿದ್ದರು.


ಪ್ರಕರಣ ಸಂಬಂಧ ಖಾಸಗಿ ವ್ಯಕ್ತಿಗಳಾದ ಮರ್ಲಿನ್ ಮೆನಗಾ, ಜೀಜಾ ರಾಮದಾಸ್, ರಜನ್ ಎಂ ಮತ್ತು ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.



Join Whatsapp