CBI ಮುಖ್ಯಸ್ಥರಾಗಿ CISF ಮುಖ್ಯಸ್ಥ ಸುಭೋದ್‌ ಜೈಸ್ವಾಲ್‌ ನೇಮಕ

Prasthutha|

ನವದೆಹಲಿ : ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿ ಸಿಐಎಸ್‌ ಎಫ್‌ ಮುಖ್ಯಸ್ಥ ಸುಭೋದ್‌ ಜೈಸ್ವಾಲ್‌, 1985ರ ತಂಡದ ಮಹಾರಾಷ್ಟ್ರ ಕೇಡರ್‌ ಐಪಿಎಸ್‌ ಅಧಿಕಾರಿ ಸಭೋದ್‌ ಜೈಸ್ವಾಲ್‌ ಅವರು ನೇಮಕಗೊಂಡಿದ್ದಾರೆ. ಸಿಬಿಐ ನಿರ್ದೇಶಕರ ಹುದ್ದೆಗೆ ರಚಿಸಲಾದ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಮೂವರು ಅಧಿಕಾರಿಗಳಲ್ಲಿ ಅವರು ಅತ್ಯಂತ ಹಿರಿಯ ಅಧಿಕಾರಿಯಾಗಿದ್ದರು.

- Advertisement -

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಉನ್ನತ ಹುದ್ದೆಗೆ 109 ಅಧಿಕಾರಿಗಳಲ್ಲಿ ಮೂವರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಿತ್ತು. ಜೈಸ್ವಾಲ್‌, ಕೆ.ಆರ್.‌ ಚಂದ್ರ ಮತ್ತು ವಿ.ಎಸ್.‌ ಕೌಮುಡಿ ಮುಂತಾದವರು ಪಟ್ಟಿಯಲ್ಲಿದ್ದರು.

ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿ ಸಿಜೆಐ ಎನ್.ವಿ. ರಮಣ ಅವರು ಪ್ರಧಾನಿ ಮೋದಿ ಸರಕಾರದ ಆದ್ಯತೆಯ ಇಬ್ಬರು ಅಧಿಕಾರಿಗಳನ್ನು ನೇಮಕಾತಿಗೊಳಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದುದು ಸುದ್ದಿಯಾಗಿತ್ತು. ಸರಕಾರದ ಆದ್ಯತೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ರಾಕೇಶ್‌ ಅಸ್ತಾನ ಮತ್ತು ವೈ.ಸಿ. ಮೋದಿ ಅವರ ಆಯ್ಕೆಗೆ ನ್ಯಾ. ರಮಣ ಅವರು ನೇಮಕಾತಿ ನಿಯಮವೊಂದನ್ನು ಉಲ್ಲೇಖಿಸಿ ಆಕ್ಷೇಪಿಸಿದ್ದರು.

Join Whatsapp