1.29 ಕೋಟಿ ರೂ ಲಂಚ: ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಕೇಸ್

Prasthutha|

ಬೆಂಗಳೂರು:ಖಾಸಗಿ ಗುತ್ತಿಗೆದಾರರಿಂದ 2011-2019 ರ ಸಾಲಿನಲ್ಲಿ 1.29 ಕೋಟಿ ರೂ ಲಂಚ ಸ್ವೀಕರಿಸಿದ ಆರೋಪದಲ್ಲಿ ನೈಋತ್ಯ ರೈಲ್ವೆ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಕೇಂದ್ರೀಯ ತನಿಖಾ ದಳ-ಸಿಬಿಐ ಪ್ರಕರಣವನ್ನು ದಾಖಲಿಸಿದೆ.
ನೈರುತ್ಯ ರೈಲ್ವೆ ಬೆಂಗಳೂರಿನ ಎಕ್ಸಿಕ್ಯೂಟಿವ್ ಇಂಜಿನಿಯರ್ ಘನ ಶ್ಯಾಮ್ ಪ್ರಧಾನ್ ಮತ್ತು ಇಬ್ಬರು ಗುತ್ತಿಗೆದಾರರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ.

- Advertisement -


ಗುತ್ತಿಗೆದಾರರು ನಿರ್ವಹಿಸುವ ಕೆಲಸಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಲಂಚವನ್ನು ಸ್ವೀಕರಿಸಿದ್ದಾರೆ. ತನಿಖೆಯ ಭಾಗವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಹಾರಾಷ್ಟ್ರದ ಸಾಂಗ್ಲಿ, ನಂದ್ಯಾಲ ಮತ್ತು ತೆಲಂಗಾಣದ ರಂಗಾರೆಡ್ಡಿ ಸೇರಿದಂತೆ 16 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತ್ತು.

Join Whatsapp