ದಲಿತರಿಗೆ ಸೆಗಣಿ ತಿನ್ನಿಸಲು ಪ್ರಯತ್ನ : ಎಂಟು ಮಂದಿ ವಿರುದ್ಧ ಪ್ರಕರಣ ದಾಖಲು

Prasthutha|

ಗದಗ: ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ದಲಿತ ವ್ಯಕ್ತಿಗಳ ಜೊತೆ ಅಮಾನವೀಯವಾಗಿ ವರ್ತಿಸಿದ ಎಂಟು ಮಂದಿಯ ಮೇಲೆ ನಗರದ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

ಪರಿಶಿಷ್ಟ ಜಾತಿಗೆ ಸೇರಿದ ಪುಂಡಲೀಕಪ್ಪ , ಹನುಮಂತ ಮತ್ತು ಗಣೇಶ ದೇವರಮಣಿ ಎಂಬ ಮೂವರು ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಎಂಟು ಮಂದಿಗಳ ಒಂದು ತಂಡ ಇವರ ಜೊತೆ ಅಮಾನವೀಯವಾಗಿ ವರ್ತಿಸಿದ್ದಲ್ಲದೆ ಈ ವೇಳೆ ರಾಜು ಬಾದಾಮಿ ಎಂಬ ವ್ಯಕ್ತಿಯೊಬ್ಬ ಪುಂಡಲೀಕ ಅವರ ಬಾಯಿಗೆ ಒತ್ತಾಯಪೂರ್ವಕವಾಗಿ ಸೆಗಣಿ ತುರುಕಿಸಲು ಯತ್ನಿಸಿದ್ದಾನೆ.

ಇದರ ಜೊತೆಗೆ ಎಂಟು ಮಂದಿಯ ತಂಡ ಈ ಮೂವರು ಪರಿಶಿಷ್ಟ ವ್ಯಕ್ತಿಗಳ ಅಂಗಿ ಬಿಚ್ಚಿಸಿ ಅವಮಾನಿಸಿದ್ದಲ್ಲದೆ ಜೀವ ಬೆದರಿಕೆ ಕೂಡಾ ಹಾಕಿದ್ದಾರೆ. ಈ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇವರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp