ಮಂಗಳೂರು: ಜೆರೋಸಾ ಸ್ಕೂಲ್ ವಿವಾದ ಪ್ರಕರಣದಲ್ಲಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಪಾಲಿಕೆ ಸದಸ್ಯರುಗಳ ಮೇಲೆ ಕೇಸು ದಾಖಲಾದ ವಿರುದ್ಧ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಮ್ಮಿಕೊಂಡಿದೆ. ಫೆಬ್ರವರಿ 19ರಂದು ನಗರದ ಎಲ್ಲಾ ಪೊಲೀಸ್ ಠಾಣೆಗಳ ಎದುರು ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುವಿಹೆಚ್‌ಪಿ ಜಿಲ್ಲಾಧ್ಯಕ್ಷ ಎಚ್‌ಕೆ ಪುರುಷೋತ್ತಮ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್‌ಕೆ ಪುರುಷೋತ್ತಮ, ಸಂತ ಜೆರೆಸೋ ಸ್ಕೂಲ್‌ನಲ್ಲಿ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀ ರಾಮದೇವರನ್ನು ನಿಂದಿಸಿ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದರಿಂದ ಪೋಷಕರು ಶಾಸಕರು ಶಾಲೆಗೆ ಹೋಗಿ ಅರೋಪಿತ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.
ಹಿಂದೂಗಳ ದೇವರನ್ನು ಅವಮಾನ ಮಾಡಿದ್ದ ಶಿಕ್ಷಕಿ ಸಿಸ್ಟರ್ ಪ್ರಭಾ ಮೇಲೆ ದೂರು ಕೊಟ್ಟರೂ ದೂರು ದಾಖಲು ಮಾಡಿಲ್ಲ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕೇಸು ದಾಖಲಿಸಿ ಶ್ರೀ ರಾಮ ದೇವರಿಗೆ ಅವಮಾನ ಮಾಡಿರುವುದನ್ನು ಇಂದೂ ಸಮಾಜ ಸಹಿಸಲ್ಲ ಆದ್ದರಿಂದ ಸಿಸ್ಟರ್ ಪ್ರಭಾ ಅವರನ್ನು ಬಂಧಿಸಿ, ಕೇಸು ದಾಖಲಿಸಿಬೇಕು. ಹಿಂದೂ ಪರ ನಾಯಕರ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದರು.
ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂ ಮೆಂಡನ್, ಭುಜಂಗ ಕುಲಾಲ್, ಮನೋಹರ ಸುವರ್ಣ, ಸಂದೀಪ್ ಸರಿಪಲ್ಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.