ತಡರಾತ್ರಿವರೆಗೆ ಓದಿ ಮಲಗಿದ ಬಾಲಕಿ ಬೆಳಿಗ್ಗೆ ನೋಡುವಾಗ ಮೃತ!

Prasthutha|

ಉಪ್ಪಿನಂಗಡಿ: ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿನಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ಸಂಭವಿಸಿದೆ.

- Advertisement -

ಉದ್ಯಮಿ ದಾವೂದ್‌ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.

ಹಫೀಝಾ ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದರು.

- Advertisement -

ಬುಧವಾರ ತಡರಾತ್ರಿವರೆಗೆ ಅಭ್ಯಾಸ ನಿರತಳಾಗಿದ್ದ ಹಫೀಝ ಬಳಿಕ ನಿದ್ರಿಸಿದ್ದು, ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಮನೆಯವರು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿತು.
ಮೃತರು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Join Whatsapp