ರಾಜ್ಯ ಸರ್ಕಾರ ಅಣಕಿಸುವ  ‘40% ಪೇಸಿಎಂ’  ಪೋಸ್ಟರ್‌ ವಿರುದ್ಧ ಕೇಸ್

Prasthutha|

ಬೆಂಗಳೂರು: ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಅಣಕಿಸುವ ಪೇಸಿಎಂ  ಮಾದರಿಯ ಪೋಸ್ಟರ್‌ ನ್ನು ನಗರದ ಹಲವೆಡೆ ಅಂಟಿಸಿರುವ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

- Advertisement -

ನಗರದ ಜಯಮಹಲ್‌ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್‌ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್‌ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಅಣಕಿಸುವ ಪೇಸಿಎಂ  ಮಾದರಿಯ ಪೋಸ್ಟರ್‌ ನ್ನು ಅಂಟಿಸಿರುವ ಸಂಬಂಧ ಮುಖ್ಯಮಂತ್ರಿಗಳು ವರದಿ ಕೇಳಿಲ್ಲ ಕೇಂದ್ರ ವಿಭಾಗದ ಪೊಲೀಸರು ಈ ಸಂಬಂಧ ಬರುವ ದೂರುಗಳನ್ನು ಪಡೆದು ತನಿಖೆಯನ್ನು ‌ನಡೆಸಲಿದ್ದಾರೆ ಎಂದರು.

- Advertisement -

ಪೇಟಿಎಂ  ಮಾದರಿಯ ಪೋಸ್ಟರ್‌ ನ್ನು ಅಂಟಿಸಿರುವ ಸಂಬಂಧ ವರದಿ ಕೇಳಿದರೆ ಮಾಹಿತಿ‌ ಸಂಗ್ರಹಿಸಿ ತನಿಖೆಯನ್ನು ‌ನಡೆಸಲಾಗುವುದು ಎಂದು ತಿಳಿಸಿದರು.

Join Whatsapp