ಅರ್ನಾಬ್ ಗೋಸ್ವಾಮಿ ವಿರುದ್ಧ ಮುಂಬೈ ಡಿಸಿಪಿಯಿಂದ ಮಾನಹಾನಿ ದೂರು

Prasthutha|

ಮುಂಬೈ : ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದುದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮುಂಬೈ ಉಪ ಪೊಲೀಸ್ ಆಯುಕ್ತ ಅಭಿಷೇಕ್ ತ್ರಿಮುಖೆ ಮಾನಹಾನಿ ದೂರು ಸಲ್ಲಿಸಿದ್ದಾರೆ.

- Advertisement -

ರಾಜ್ಯ ಸರಕಾರದ ಗೃಹ ಇಲಾಖೆಯಿಂದ ಅಗತ್ಯ ಪ್ರಕ್ರಿಯೆ ಅನುಮತಿಯನ್ನು ಪಡೆದುಕೊಂಡ ಬಳಿಕ ತ್ರಿಮುಖೆ ಅವರು ಅರ್ನಾಬ್ ಗೋಸ್ವಾಮಿ ಮತ್ತು ಅವರ ಸುದ್ದಿ ವಾಹಿನಿ ವಿರುದ್ಧ ದೂರು ದಾಖಲಿಸಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತ ವರದಿಯ ವಿಷಯದಲ್ಲಿ ಅರ್ನಾಬ್ ಗೋಸ್ವಾಮಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ತಮ್ಮ ತೇಜೋವಧೆ ಮಾಡಲಾಗಿದೆ. ಆಧಾರ ರಹಿತ ಆರೋಪಗಳ ಮೂಲಕ ಮಾನನಷ್ಟ ಮಾಡಲಾಗಿದೆ ಎಂದು ತ್ರಿಮುಖೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp