ಬೈಕ್ ಗೆ ಡಿಕ್ಕಿ ಹೊಡೆದು 10 ಕಿ.ಮೀ ಎಳೆದೊಯ್ದ ಕಾರು; ಇಬ್ಬರು ದಾರುಣ ಸಾವು

Prasthutha|

ಹೈದರಾಬಾದ್: ಕಾರೊಂದು ಬೈಕ್ ಅನ್ನು ಸುಮಾರು 10 ಕಿ.ಮೀ. ದೂರದವರೆಗೆ ಎಳೆದೊಯ್ದ ಪರಿಣಾಮ ಇಬ್ಬರು ಯುವಕರು ದುರಂತ ಸಾವಿಗೀಡಾದ ಘಟನೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಮಲ್ಯಾಲ ಮಂಡಲದ ಮುತ್ಯಂಪೇಟೆಯಲ್ಲಿ ನಡೆದಿದೆ.

- Advertisement -


ಮೃತರನ್ನು ಅಬ್ದುಲ್ ಲತೀಫ್ ಮತ್ತು ಮುಹಮ್ಮದ್ ಹಮೀದ್ ಖಾನ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕರೀಮ್’ನಗರ ಜಿಲ್ಲೆಯ ಮಾನಕೊಂಡೂರು ನಿವಾಸಿಗಳು ಎಂದು ತಿಳಿದುಬಂದಿದೆ.
ವೇಗವಾಗಿ ಬಂದ ಕಾರೊಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಅಡಿಯಲ್ಲಿ ಬೈಕ್ ಸಿಲುಕಿದೆ. ಕಾರು ನಿಲ್ಲಿಸದೇ ಸುಮಾರು 10 ಕಿ.ಮೀ ಹಾಗೇ ಎಳೆದುಕೊಂಡು ಹೋದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.


ಬೈಕ್ ಓಡಿಸುತ್ತಿದ್ದ ಹಮೀದ್ ಖಾನ್’ ನನ್ನು ಬೈಕ್ ಸಮೇತ ಕಾರು ಚಾಲಕ ಎಳೆದೊಯ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಹಮೀದ್ ಖಾನ್ ಕೊನೆಯುಸಿರೆಳೆದಿದ್ದಾರೆ. ಕಾರು ಡಿಕ್ಕಿಯಾಗಿ ಕೆಳಗಡೆ ಬಿದ್ದಿದ್ದ ಹಿಂಬದಿ ಸವಾರ ಅಬ್ದುಲ್ ಲತೀಫ್ ರನ್ನು ಚಿಕಿತ್ಸೆಗಾಗಿ ಹೈದರಾಬಾದ್’ನ ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿದೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಗಿತಿಯಾಸ್ ಮೂಲದ ಕಾರು ಚಾಲಕ ಸಾಯಿವರ್ಧನ್ ಎಂಬಾತನನ್ನು ಬಂಧಿಸಿದ್ದಾರೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join Whatsapp