ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನೀತಿ ಸಂಹಿತೆ ತೊಡಕಾಗದಂತೆ ಕ್ರಮಕೈಗೊಳ್ಳಲು ಎಸ್’ಡಿಪಿಐ ಮನವಿ

Prasthutha|

ಬೆಂಗಳೂರು: ದೇಶದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಯಾವುದೇ ನೀತಿ ಸಂಹಿತೆ ತೊಡಕಾಗದಂತೆ ಚುನಾವಣಾ ದಿನಾಂಕಗಳ ಘೋಷಣೆಯನ್ನು ಅಂಬೇಡ್ಕರ್ ಜಯಂತಿಯ ನಂತರ ಘೋಷಣೆ ಮಾಡಬೇಕು ಎಂದು ಎಸ್.ಡಿಪಿಐ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

- Advertisement -


ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪುಲಿಕೇಶಿನಗರದ ಅಭ್ಯರ್ಥಿ ಬಿ.ಆರ್. ಭಾಸ್ಕರ್ ಪ್ರಸಾದ್ ನೇತೃತ್ವದ ನಿಯೋಗ ಮನವಿ ಪತ್ರ ಸಲ್ಲಿಸಿದೆ.
ಏಪ್ರಿಲ್ 14 ಅಂಬೇಡ್ಕರ್ ಜಯಂತಿ, ದೇಶದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕ ಅವರ ಜಯಂತಿ ಆಚರಣೆಗೆ ಯಾವುದೇ ನೀತಿ ಸಂಹಿತೆ ತೊಡಕಾಗದಂತೆ ಚುನಾವಣಾ ದಿನಾಂಕಗಳ ಘೋಷಣೆಯನ್ನು ಅಂಬೇಡ್ಕರ್ ಜಯಂತಿಯ ನಂತರ ಘೋಷಣೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಒದಗಿಸಲು ಕರ್ನಾಟಕದಲ್ಲಿ ಚುನಾವಣೆಗಳನ್ನು ಎರಡು ಹಂತಗಳಲ್ಲಿ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.


ಮನವಿ ಸ್ವೀಕರಿಸಿದ ಮೀನಾ ಅವರು, ಭಾರತದ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆಗೂ ಮುನ್ನ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಎಲ್ಲರ ಕಡೆಯಿಂದ ಈ ಮನವಿ ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

- Advertisement -


ನಿಯೋಗದಲ್ಲಿ ಪಕ್ಷದ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮುಜಾಹಿದ್ ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಮ್, ಜಿಲ್ಲಾ ಕಾರ್ಯದರ್ಶಿ ಎಂ.ಕೆ. ಮೇತ್ರಿ ಅವರು ಉಪಸ್ಥಿತರಿದ್ದರು.

Join Whatsapp