ಸುರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಶತಮಾನದ ಜೋಕ್: ಕಾಂಗ್ರೆಸ್ ಲೇವಡಿ

Prasthutha|

ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ

- Advertisement -


ಬೆಂಗಳೂರು: ಸುರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಶತಮಾನದ ಜೋಕ್! ಸುರತ್ಕಲ್’ನಲ್ಲಿ ಸಂಗ್ರಹಿಸುವ ಟೋಲ್ ಮೊತ್ತವನ್ನು 4 ಕಿ.ಮಿ ದೂರದ ಹೆಜಮಾಡಿ ಟೋಲ್’ಗೆ ವರ್ಗಾಯಿಸಿದ್ದು ಜೋಕ್ ಅಲ್ಲದೆ ಇನ್ನೇನು ನಳಿನ್ ಕುಮಾರ್ ಅವರೇ? ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಹೇಳಿದೆ.


ಮಾನ್ಯ ನಳಿನ್ ಕುಮಾರ್ ಕಟೀಲ್ ಅವರೇ, ಯಾವುದಕ್ಕೆ ಈ ಧನ್ಯವಾದ. ಜನರಿಗೆ ಮಂಕುಬೂದಿ ಎರಚಲು ಸಹಕರಿಸಿದ್ದಕ್ಕಾ? ದ್ರೋಹ ಎಸಗಿದ್ದಕ್ಕಾ? ಟೋಲ್ ಸಂಗ್ರಹವನ್ನು ನಾಲ್ಕು ಕಿ.ಮಿ ದೂರಕ್ಕೆ ವರ್ಗಾಯಿಸಿದ್ದಕ್ಕಾ? ಸೂರತ್ಕಲ್ ಟೋಲ್’ನ ಗೇಟನ್ನು ಮಾತ್ರ ರದ್ದುಗೊಳಿಸಿ ಆ ಮೊತ್ತವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದಕ್ಕೆ ಮೋದಿಯವರಿಗೆ ಧನ್ಯವಾದ ತಿಳಿಸಿದಿರಾ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ವ್ಯಂಗ್ಯವಾಡಿದೆ.

Join Whatsapp