ವಾಕ್ ಸ್ವಾತಂತ್ರ್ಯಕ್ಕೆ ಮಿತಿಯಿದೆ | ಅದರಿಂದ ಇನ್ನೊಂದು ಸಮುದಾಯಕ್ಕೆ ನೋವಾಗಬಾರದು : ಕೆನಡಾ ಪ್ರಧಾನಿ

Prasthutha|

ಒಟ್ಟಾವ : ವಾಕ್ ಸ್ವಾತಂತ್ರ್ಯ ಎಂಬುದು ಎಲ್ಲೆಯಿಲ್ಲದ ಸ್ವಾತಂತ್ರ್ಯವಲ್ಲ, ಅದರಿಂದ ಅನಗತ್ಯವಾಗಿ ಇನ್ನೊಂದು ಸಮುದಾಯಕ್ಕೆ ನೋವುಂಟಾಗಬಾರದು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೊ ಹೇಳಿದ್ದಾರೆ. ಇದೇ ವೇಳೆ, ತಾವು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

- Advertisement -

“ನಾವು ಯಾವತ್ತೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸುತ್ತೇವೆ. ಆದರೆ ಈ ಸ್ವಾತಂತ್ರ್ಯ ಮಿತಿಯಿಲ್ಲದ ಸ್ವಾತಂತ್ರ್ಯವಲ್ಲ, ಇತರರಿಗೆ ಗೌರವ ನೀಡದೆ ನಾವು ಈ ಸಮಾಜ ಹಾಗೂ ಜಗತ್ತನ್ನು ಹಂಚಿಕೊಂಡಿರುವ ಇತರರಿಗೆ ಅನಗತ್ಯವಾಗಿ ನೋವುಂಟು ಮಾಡಬಾರದು’’ ಎಂದು ಜಸ್ಟಿನ್ ಹೇಳಿದ್ದಾರೆ.

“ಉದಾಹರಣೆಗೆ ಜನರಿಂದ ತುಂಬಿರುವ ಚಿತ್ರಮಂದಿರದಲ್ಲಿ ಗುಂಡಿಕ್ಕಿ ಎಂದು ಬೊಬ್ಬೆ ಹೊಡೆಯುವ ಹಕ್ಕು ನಮಗಿಲ್ಲ, ಎಲ್ಲದಕ್ಕೂ ಒಂದು ಮಿತಿಯಿರುತ್ತದೆ’’ ಎಂದು ಅವರು ಹೇಳಿದ್ದಾರೆ.  

- Advertisement -

ಫ್ರಾನ್ಸ್ ನ ‘ಚಾರ್ಲಿ ಹೆಬ್ಡೊ’ ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮುಹಮ್ಮದರ ಕಾರ್ಟೂನ್ ವಿವಾದಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಫ್ರಾನ್ಸ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದಾರೆ.   

Join Whatsapp