ಪ್ರವಾದಿ ಮುಹಮ್ಮದರ ಅವಮಾನ | ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವಿರುದ್ಧ ಪ್ರತಿಭಟನೆ | ಭೋಪಾಲ್ ನಲ್ಲಿ 2000 ಮಂದಿ ವಿರುದ್ಧ ಕೇಸ್

Prasthutha|

ಭೋಪಾಲ್ : ಫ್ರಾನ್ಸ್ ನಲ್ಲಿ ಇತ್ತೀಚೆಗೆ ಪ್ರವಾದಿ ಮುಹಮ್ಮದರ ಅವಮಾನಿಸಿದ ಘಟನೆಗಳನ್ನು ಖಂಡಿಸಿ, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ವಿರುದ್ಧ ಭೋಪಾಲ್ ನಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ಜನರ ವಿರುದ್ಧ ಮಧ್ಯಪ್ರದೇಶ ಸರಕಾರ ಪ್ರಕರಣ ದಾಖಲಿಸಿಕೊಂಡಿದೆ. ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಮತ್ತು ಸುಮಾರು 2,000 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಪ್ರತಿಭಟನಕಾರರ ವಿರುದ್ಧ ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿದ ಆರೋಪ ದಾಖಲಿಸಲಾಗಿದೆ. ಆರಿಫ್ ಮಸೂದ್, ಕೆಲ ಧಾರ್ಮಿಕ ಮುಖಂಡರು ಸೇರಿದಂತೆ 2 ಸಾವಿರ ಮಂದಿ ಐಪಿಸಿ ಕಲಂ 188ರ (ಸರಕಾರಿ ಆದೇಶಕ್ಕೆ ಅಗೌರವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಲೈಯಾ ಪೊಲೀಸ್ ಠಾಣಾಧಿಕಾರಿ ಡಿ.ಪಿ. ಸಿಂಗ್ ಹೇಳಿದ್ದಾರೆ.

‘ಚಾರ್ಲಿ ಹೆಬ್ಡೊ’ ಎಂಬ ವಾರಪತ್ರಿಕೆಯು ಪ್ರವಾದಿ ಮುಹಮ್ಮದರ ವಿವಾದಾತ್ಮಕ ಕಾರ್ಟೂನ್ ಗಳನ್ನು ಪ್ರಕಟಿಸಿರುವುದನ್ನು ಬೆಂಬಲಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ನಡೆಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp