ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಬಹುದೇ? ಎಂದು ಪ್ರತಿಪಕ್ಷ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರಶ್ನಿಸಿದ್ದಾರೆ.
ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೂ ಮುನ್ನ ಮಾತನಾಡಿದ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರನ್ನು ನಾನು ಯಾವಾಗಲೂ ‘ದಶರಥ್’ ಮತ್ತು ತಂದೆ ಸಮಾನ ಎಂದು ಪರಿಗಣಿಸಿದ್ದೇನೆ. ಆದರೆ ‘ಮಹಾಘಟಬಂಧನ್’ ಕೈಬಿಟ್ಟು ಎನ್ಡಿಎಗೆ ಮರಳಲು ಅವರನ್ನು ಒತ್ತಾಯಿಸಿದ್ದು ಯಾರು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.