ವಿಶ್ವಾಸ ಮತ ಗೆದ್ದ ಸಿಎಂ ನಿತೀಶ್ ಕುಮಾರ್

Prasthutha|

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ. 243 ವಿಧಾನಸಭೆ ಕ್ಷೇತ್ರಗಳ ಪೈಕಿ ವಿಶ್ವಾಸ ಮತ ಸಾಬೀತು ಪಡಿಸಲು 122 ಮತಗಳ ಅವಶ್ಯಕತೆ ಇತ್ತು. ನಿತೀಶ್ ಸರ್ಕಾರದ ಪರವಾಗಿ 129 ಮತಗಳು ಚಲಾವಣೆಯಾಗಿವೆ.

- Advertisement -


ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಸರ್ಕಾರದ ವಿಶ್ವಾಸಮತ ಪರೀಕ್ಷೆಗೂ ಮುನ್ನವೇ ಎನ್ ಡಿಎ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಾಗಿತ್ತು. ಆರ್ ಜೆಡಿ ಕೋಟಾದಿಂದ ಸ್ಪೀಕರ್ ಆದ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾಪದ ಮೇಲಿನ ಮತದಾನದಲ್ಲಿ 125 ಶಾಸಕರು ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸಿದರೆ 112 ಶಾಸಕರು ಮಾತ್ರ ವಿರೋಧ ಪಕ್ಷದಲ್ಲಿ ಉಳಿದಿದ್ದಾರೆ.

Join Whatsapp