ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಮಕ್ಕಳಿಗೆ ಧರ್ಮ ನಿಂದನೆಯ ಪಾಠ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಹದಿಹರೆಯದ ಮಕ್ಕಳ ಬಾಯಲ್ಲಿ ಜೈಶ್ರೀರಾಂ ಎಂಬ ಘೋಷಣೆಯನ್ನು ಕೂಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಬಿಜೆಪಿ ಸಂಘಪರಿವಾರ ಗುಂಪು ಹಲ್ಲೆ ಕೊಲೆ ನಡೆಸುವಾಗ ಬಳಸುವ ಜೈಶ್ರೀರಾಂ ಎಂಬ ಘೋಷಣೆಯನ್ನು ಹದಿಹರೆಯದ ಮಕ್ಕಳ ಬಾಯಲ್ಲಿ ಹೇಳಿಸುವ ಈ ಶಾಸಕನ ನಡೆಯನ್ನು ಒಪ್ಪುವಿರಾ? ಒಂದು ವೇಳೆ ಮುಸ್ಲಿಂ ಕ್ರೈಸ್ತ ಧರ್ಮದ ಆಚರಣೆಗಳನ್ನು ಮಕ್ಕಳ ಬಾಯಲ್ಲಿ ಹೇಳಿಸಿದರೆ ದೆವ್ವ ಹಿಡಿದಂತೆ ಮಾಡಿ ರಂಪಾಟ ನಡೆಸಿದಾಗ ಬಿಜೆಪಿ/ಸಂಘಪರಿವಾರದ ಒತ್ತಡಕ್ಕೆ ಮಣಿದು ಕಾನೂನು ಕ್ರಮ ಜರುಗಿಸುವ ನಿಮ್ಮ ಸರ್ಕಾರದಿಂದ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕ್ರಮ ನಿರೀಕ್ಷಿಸಬಹುದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ವಜಾಗೊಳಿಸಲಾಗಿದೆ.