ಮಂಗಳೂರು ವಿವಿ ಮಂಗಳಗಂಗೋತ್ರಿ ಪದವಿ ಕಾಲೇಜಿಗೆ ಪೂರ್ಣ ಪ್ರಮಾಣದ ಕಟ್ಟಡ ಒದಗಿಸುವಂತೆ ಕ್ಯಾಂಪಸ್ ಫ್ರಂಟ್ ಕುಲಪತಿಗೆ ಮನವಿ

Prasthutha|

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ಹಲವಾರು ವರ್ಷಗಳಿಂದ ಪದವಿ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಆದರೆ ಇದುವರೆಗೆ ಪೂರ್ಣ ಪ್ರಮಾಣದ ಕಟ್ಟಡವಿಲ್ಲ. ಪ್ರಸ್ತುತ ಇರುವ ಪದವಿ ಕಟ್ಟಡದಲ್ಲಿ ಅಂತಿಮ ವರ್ಷದ ಬಿ.ಕಾಂ, ಬಿಬಿಎ, ದ್ವಿತೀಯ ವರ್ಷದ ಬಿಬಿಎ , ಪ್ರಥಮ ವರ್ಷದ ಬಿಬಿಎ ತರಗತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು,  ಇನ್ನುಳಿದ ಪ್ರಥಮ,ದ್ವಿತೀಯ,ತೃತೀಯ ಬಿಎ ತರಗತಿಗಳು ಮೈದಾನದ ಗ್ಯಾಲರಿಯಲ್ಲಿ ನಡೆಯುತ್ತಿದ್ದು,ಪ್ರಥಮ ಬಿಕಾಂ ಎ ಮತ್ತು ಬಿ ಹಾಗೂ ದ್ವಿತೀಯ ಬಿಕಾಂ ತರಗತಿಗಳು ಯಕ್ಷಗಾನ ಕಲಾ ಮಂದಿರದಲ್ಲಿ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಉಪನ್ಯಾಸಕರಿಗೂ ತೊಂದರೆಯಾಗುತ್ತಿದ್ದು, ಒಂದು ತರಗತಿ ನಡೆಸಿ ಇನ್ನೊಂದು ತರಗತಿ ನಡೆಸಲು ಬಹುದೂರ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

- Advertisement -

ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಪದವಿಯ ಎಲ್ಲಾ ತರಗತಿಗಳನ್ನು ಒಂದೇ ಕಟ್ಟಡದಲ್ಲಿ ನಡೆಸಬೇಕು, ತಕ್ಷಣ ಇದು ಕಾರ್ಯರೂಪಕ್ಕೆ ಬರುವಂತೆ ಪೂರ್ಣ ಪ್ರಮಾಣದ ಕಟ್ಟಡವನ್ಜು ಒದಗಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿವಿ ಘಟಕವು ಕುಲಪತಿಗೆ ಮನವಿ ನೀಡಲಾಯಿತು. ತಿಂಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ್ದು ಬಗೆಹರಿಯದಿದ್ದಲ್ಲಿ ಮುಂದಿನ ಹೋರಾಟವನ್ನು ನಡೆಸಲಿದ್ದೇವೆ ಎಂದು ವಿವಿ ವಿದ್ಯಾರ್ಥಿ ಮುಖಂಡ ಉಮರ್ ಮುಕ್ತಾರ್ ತಿಳಿಸಿದ್ದಾರೆ.

 ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ವಿವಿ ವಿದ್ಯಾರ್ಥಿ ನಾಯಕರಾದ ಆಶಿಕ್, ರಿಝ್ವಾನ್ ಹಾಗೂ ಸಮೀರ್ ಇದ್ದರು.



Join Whatsapp