ಡ್ರಗ್ಸ್ ಪ್ರಕರಣದಲ್ಲಿ ಪುತ್ರ ಬಂಧನದ ಹಿನ್ನೆಲೆ: ಜಾಹೀರಾತಿನಿಂದ ಬಾಲಿವುಡ್ ನಟ ಶಾರುಕ್ ರನ್ನು ಕೈಬಿಟ್ಟ ಬೈಜೂಸ್ ಕಂಪೆನಿ

Prasthutha|

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಪುತ್ರ ಆರ್ಯಾನ್ ಬಂಧನದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರನ್ನು ಬೈಜೂಸ್ ಕಂಪೆನಿ ತನ್ನ ಜಾಹೀರಾತಿನಿಂದ ಕೈಬಿಟ್ಟಿದೆ.

- Advertisement -

ಈ ಹಿನ್ನೆಲೆಯಲ್ಲಿ ಶಾರುಕ್ ಸುಮಾರು ವಾರ್ಷಿಕ ಆದಾಯ 5 ಕೋಟಿಯನ್ನು ಕಳೆದುಕೊಂಡಿದ್ದಾರೆ.

2017 ರಿಂದ ಮಕ್ಕಳಿಗೆ ಶಿಕ್ಷಣ ನೀಡುವ ಸಾಫ್ಟ್ ವೇರ್ ನ ಬೈಜೂಸ್ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ಶಾರುಕ್ ಅವರನ್ನು ಪ್ರಸಕ್ತ ಕಂಪೆನಿ ಜಾಹೀರಾತಿನಿಂದ ಕೈಬಿಟ್ಟಿದೆ.

- Advertisement -

ತನ್ನ ಮಕ್ಕಳಿಗೆ ಉತ್ತಮ ನಡುವಳಿಕೆ ಮತ್ತು ಜಾಗೃತಿ ಮೂಡಿಸದವರು ಇತರ ಮಕ್ಕಳಿಗೆ ಬುದ್ಧಿಮಾತು ಹೇಳುವುದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಬಂದ ಹಿನ್ನೆಲೆಯಲ್ಲಿ ಕಂಪೆನಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಬೈಜೂಸ್ ಸ್ಪಷ್ಟಪಡಿಸಿದೆ.

Join Whatsapp