ವಿಧಾನಸೌಧದಿಂದ 1 ಕಿ.ಮೀ ಅಂತರದಲ್ಲಿ ಬಸ್ ನಿಲ್ದಾಣ ಕಳ್ಳತನ

Prasthutha|

ಬೆಂಗಳೂರು: ವಿಧಾನಸೌಧದಿಂದ 1 ಕಿ.ಮೀಗಿಂತ ಕಡಿಮೆ ದೂರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಕದ್ದೊಯ್ದಿದ್ದಾರೆ. ನಿರ್ಮಿಸಿದ್ದ ಒಂದು ವಾರದೊಳಗೆ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿದೆ.

- Advertisement -


ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಖಾಸಗಿ ಕಂಪನಿಯೊಂದು ಸ್ಟೀಲ್ನಿಂದ ಬಿಎಂಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿತ್ತು. ಆದ್ರೆ, ಒಂದು ತಿಂಗಳಲ್ಲಿ ಸ್ಥಳದಿಂದ ಬಸ್ ನಿಲ್ದಾಣ ನಾಪತ್ತೆಯಾಗಿದೆ.


ಸೆಪ್ಟೆಂಬರ್ 30ರಂದು ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲಿಸರು, ಕದ್ದುಕೊಂಡು ಹೋಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.



Join Whatsapp