ಚಂದ್ರಬಾಬು ನಾಯ್ಡು ಬೆಂಬಲಿಸಲು NDA ತೊರೆದ ಪವನ್ ಕಲ್ಯಾಣ್

Prasthutha|

ಪೆಡನಾ: ಟಿಡಿಪಿಯನ್ನು ಬೆಂಬಲಿಸಲು ಬಿಜೆಪಿ ನೇತೃತ್ವದ ಎನ್ ಡಿಎಯಿಂದ ಹೊರಬಂದಿರುವುದಾಗಿ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ.

- Advertisement -


ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಟಿಡಿಪಿ ಬಲಿಷ್ಠ ಪಕ್ಷವಾಗಿದ್ದು, ಆಂಧ್ರಪ್ರದೇಶದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಇಂದು ಟಿಡಿಪಿ ಹೋರಾಟದಲ್ಲಿದ್ದು, ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನಸೇನಾ ಯುವ ರಕ್ತದ ಬೆಂಬಲ ಬೇಕು. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ ರಾಜ್ಯದಲ್ಲಿ ವೈಎಸ್ ಆರ್ ಸಿಪಿ ಮುಳುಗಲಿದೆ ಎಂದರು.

Join Whatsapp