ಮನೆಯ ಕಾಂಪೌಂಡ್ ಗೆ ನುಗ್ಗಿದ ಬಸ್: ಚಾಲಕ ಪರಾರಿ

Prasthutha|

ಬೆಂಗಳೂರು: ವೇಗವಾಗಿ ಬಂದ ಖಾಸಗಿ ಬಸ್‍ ವೊಂದು ಮನೆಯ ಕಾಂಪೌಂಡ್‍ ಗೆ ಗುದ್ದಿದ ಘಟನೆ ಇಂದು ಬೆಳಿಗ್ಗೆ ಜಾಲಹಳ್ಳಿ ಅಯ್ಯಪ್ಪ ಟೆಂಪಲ್ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.

- Advertisement -

ಬಸ್ ಜಾಲಹಳ್ಳಿ ಕಡೆ ಬರುತ್ತಿದ್ದ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯೊಂದರ ಕಾಂಪೌಂಡ್‍ ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಬಸ್‍ ನ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್‍ ನಲ್ಲಿ ಪ್ರಯಾಣಿಕರಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಫೆಡರಲ್ ಮೊಗಲ್ ಕಂಪನಿಗೆ ಸೇರಿದ ಬಸ್ ಇದಾಗಿದ್ದು, ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Join Whatsapp