ಆಯಸ್ಸು ಗಟ್ಟಿಯಿದ್ದರೆ ಬಸ್ ನವರೂ ಬ್ರೇಕ್ ಹಾಕ್ತಾರೆ!

Prasthutha|

ಪುದುಚೇರಿ: ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎರಡು ಬಸ್ ಗಳ ನಡುವೆ ಸಿಲುಕಿದ ದಂಪತಿ, ಪುಟ್ಟ ಮಗುವಿನೊಂದಿಗೆ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ ನಡೆದಿದೆ.

- Advertisement -

ಪುಟ್ಟ ಮಗುವಿನ ಜೊತೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಬಸ್ ಒಂದನ್ನು ಓವರ್ ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಿಂದ ಮತ್ತೊಂದು ಬಸ್ ಬಂದಿದೆ. ಈ ವೇಳೆ ಎರಡು ಬಸ್ ಗಳ ನಡುವೆ ಸ್ಕೂಟರ್ ಸಿಲುಕಿಕೊಂಡಿದೆ. ಆದರೆ ಎರಡೂ ಬಸ್’ನ ಚಾಲಕರು ಸಮಯೋಚಿತವಾಗಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಪರಿಣಾಮ ಮೂವರ ಜೀವ ಉಳಿದಿದೆ.  

ಪುದುಚೇರಿಯ ಕಲ್ ಮಂಟಪಂ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಮೈಜುಂ ಎನ್ನುವ ದೃಶ್ಯ ಸೆರೆಯಾಗಿದೆ. ಮಗುವಿನೊಂದಿಗೆ ಸ್ಕೂಟರ್ ನಿಂದ ಬಿದ್ದ ಮಹಿಳೆ, ನಿರ್ಲಕ್ಷ್ಯದಿಂದ ಸ್ಕೂಟರ್ ಚಲಾಯಿಸಿದ ತನ್ನ ಪತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

Join Whatsapp