ಶಾರುಖ್ ಖಾನ್ ಜನ್ಮದಿನದ ಶುಭಾಶಯ ಕೋರಿದ ಬುರ್ಜ್ ಖಲೀಫಾ!

Prasthutha|

ದುಬೈ: ನಿನ್ನೆ 56ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟ ಖಾನ್ ಶಾರುಖ್ ಖಾನ್ ಗೆ ಬುರ್ಜ್ ಖಲೀಫಾ ಹುಟ್ಟುಹಬ್ಬದ ಶುಭಾಶಯ ಕೋರಿದೆ.

- Advertisement -


ಹ್ಯಾಪಿ ಬರ್ತ್ ಡೇ ಶಾರುಖ್, ಹ್ಯಾಪಿ ಬರ್ತ್ ಡೇ SRK ಎಂದು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ರಾರಾಜಿಸಿದೆ.
ಶಾರುಖ್ ಖಾನ್ ಅವರ ಚಿತ್ರದೊಂದಿಗೆ, ಬುರ್ಜ್ ಖಲೀಫಾದಲ್ಲಿ ‘ವಿ ಲವ್ ಯೂ’ ಎಂಬ ಬರಹವೂ ಅಭಿಮಾನಿಗಳನ್ನು ಹುಬ್ಬೇರಿಸಿದೆ.

ನಿನ್ನೆ ಬುರ್ಜ್ ಖಲೀಫಾದಲ್ಲಿ ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಮ್ಮಾರ್ ಪ್ರಾಪರ್ಟಿಸ್ ಇ–ಕಾಮರ್ಸ್ ವೆಂಚರ್ಸ್ ನೂನ್’ ಸಂಸ್ಥೆಯ ಮೊಹಮ್ಮದ್ ಅಲಬಾರ್ ಅವರು ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ.

Join Whatsapp