ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ: ಇಬ್ಬರ ಬಂಧನ

Prasthutha|

ಬೆಂಗಳೂರು; ಬೀಗ ಹಾಕಿರುವ ಮನೆಗಳನ್ನೇ ಗುರುತಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಪುಟ್ಟೇನಹಳ್ಳಿ ಪೊಲೀಸರು 35 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪೀಣ್ಯದ ಚೊಕ್ಕಸಂದ್ರದ ಇರ್ಫಾನ್ ಶರೀಫ್ (56), ದೇವನಹಳ್ಳಿಯ ಯರಮಹಳ್ಳಿಯ ಬಿಲಾಲ್ ಖಾನ್ (32) ಬಂಧಿತ ಆರೋಪಿಗಳು ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 35 ಲಕ್ಷ 12 ಸಾವಿರದ 300 ಮೌಲ್ಯದ 800 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಆರೋಪಿ ಇರ್ಫಾನ್ ಶರೀಫ್ ಪಿನಾಯಿಲ್ ಆಸಿಡ್ ಮಾರಾಟಗಾರನಾಗಿದ್ದು ಪತ್ನಿ ಮಕ್ಕಳಿದ್ದು 15 ವರ್ಷಗಳ ಹಿಂದೆ ಅವರನ್ನು ತೊರೆದು ಬೇರೆ ಬೇರೆ ಕಡೆಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ 15 ವರ್ಷಗಳಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಇರ್ಫಾನ್ ವಿರುದ್ಧ ರಾಜ್ಯಾದ್ಯಂತ 33 ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.
ಈ ಹಿ…

Join Whatsapp