ಹೊಸದಿಲ್ಲಿ: ಮಹಿಳೆಯರನ್ನು ಹರಾಜು ಹಾಕಲು ಬಳಸುತ್ತಿದ್ದ ಬುಲ್ಲಿಬಾಯಿ ಆ್ಯಪ್ ನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ದೆಹಲಿ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಯತ್ನಿಸಿದ್ದಾನೆ ಎಂದು ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್‌ಎಸ್‌ಒ) ವಿಶೇಷ ಘಟಕದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.
21 ವರ್ಷದ ಆರೋಪಿ ನೀರಜ್ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯರನ್ನು ಹರಾಜು ಹಾಕುವ ‘ಸುಲ್ಲಿ ಡೀಲ್’ ಆ್ಯಪ್‌ನ ನಿರ್ಮಾಣ ಮಾಡಿದವರು ತನಗೆ ತಿಳಿದಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಲ್ಹೋತ್ರಾ ಹೇಳಿದರು.