2023-24ನೇ ಸಾಲಿನ ಬಜೆಟ್ ಮಂಡನೆ; ದೊಡ್ಡ ಮಟ್ಟದ ನಿರೀಕ್ಷೆಯಲ್ಲಿರುವ ಜನ ಸಾಮಾನ್ಯರು

Prasthutha|

ನವದೆಹಲಿ: ಕೇಂದ್ರ ಸಂಪುಟ ಸಭೆ ಆರಂಭವಾದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ 2023-24ನೇ ಸಾಲಿನ ಕೇಂದ್ರ ಬಜೆಟ್‌ನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.2014ರಿಂದ ಹಿಡಿದು ಮೋದಿ ಆಡಳಿತದಲ್ಲಿ ಮಂಡನೆಯಾಗುತ್ತಿರುವ 11ನೇ ಬಜೆಟ್(2019 ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಮಂಡಿಸಲಾದ ಒಂದು ಮಧ್ಯಂತರ ಬಜೆಟ್ ಸೇರಿದಂತೆ) ಆಗಿದೆ.ಇದು ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್‌ ಆಗಿದ್ದು, ಜನಸಾಮಾನ್ಯರು ದೊಡ್ಡಮಟ್ಟದ ನಿರೀಕ್ಷೆಗಳನ್ನು ಹೊಂದಿದ್ದಾರೆ.

- Advertisement -

ಕಳೆದ ವರ್ಷದ ರೀತಿಯೇ ಈ ಬಾರಿಯೂ ಕೇಂದ್ರ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಸಾಂಪ್ರದಾಯಿಕ ‘ಬಹಿ-ಖಾತಾ’ ಶೈಲಿಯ ಚೀಲದಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದ್ದಾರೆ.

9 ವರ್ಷಗಳಿಂದ ಬದಲಾವಣೆಯಾಗದ ಆದಾಯ ತೆರಿಗೆ ಸ್ಲಾಬ್‌ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಮೂಲಗಳ ಪ್ರಕಾರ, ಶೇ. 10-15ರ ತೆರಿಗೆ ದರದಲ್ಲಿ ಸರ್ಕಾರವು 8-10 ಲಕ್ಷ ರೂ.ನ ಹೊಸ ತೆರಿಗೆ ಸ್ಲ್ಯಾಬ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ. ಸದ್ಯ ಈ ಆದಾಯಕ್ಕೆ ಶೇ. 20ರಷ್ಟು ತೆರಿಗೆ ಇದೆ. 10 ಲಕ್ಷ ರೂ.ಗೂ ಹೆಚ್ಚಿನ ಆದಾಯದ ಮೇಲಿರುವ ಶೇ. 30ರ ತೆರಿಗೆಯನ್ನು ಶೇ. 25ಕ್ಕೆ ಇಳಿಕೆ ಮಾಡುವ ನಿರೀಕ್ಷೆಯೂ ಇದೆ.

- Advertisement -

ಸ್ವಾತಂತ್ರ್ಯ ಭಾರತದಲ್ಲಿ ಸತತ ಐದನೇ ಬಜೆಟ್ ಮಂಡಿಸುತ್ತಿರುವ 6ನೇ ಹಣಕಾಸು ಸಚಿವೆ ಎಂಬ ಖ್ಯಾತಿಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. 2019ರಿಂದ 2023ರವರೆಗೆ ಇದು ಅವರು ಮಂಡಿಸುತ್ತಿರುವ ಸತತ ಐದನೇ ಬಜೆಟ್ ಆಗಿದ್ದು, ಈ ಮೂಲಕ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಿ. ಚಿದಂಬರಂ, ಅರುಣ್ ಜೇಟ್ಲಿ ಸಾಲಿಗೆ ಸೇರಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯ ನಂತರ, ಮೋದಿ 2.0 ಸರ್ಕಾರದಲ್ಲಿ, ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಯಿತು.



Join Whatsapp