ಇಂದಿರಾ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ, ಅದೊಂದು ಅಪಘಾತ ಎಂದ ಬಿಜೆಪಿ ಸಚಿವ

Prasthutha|

ಹೊಸದಿಲ್ಲಿ: ಇಂದಿರಾ ಗಾಂಧಿ ಹಾಗೂ ರಾಜೀವ್​ಗಾಂಧಿ ಮೃತಪಟ್ಟಿರುವುದನ್ನು ಹುತಾತ್ಮರಾಗಿದ್ದಾರೆ ಎನ್ನಲು ಸಾಧ್ಯವಿಲ್ಲ ಇದೊಂದು ಅಪಘಾತವಷ್ಟೇ ಎಂದು ಉತ್ತರಾಖಂಡ ಸಚಿವ ಗಣೇಶ್​ ಜೋಶಿ ಹೇಳಿದ್ದಾರೆ.

- Advertisement -

ತ್ಯಾಗ ಕೇವಲ ಇಂದಿರಾಗಾಂಧಿ ಕುಟುಂಬಕ್ಕೆ ಸೇರಿದ್ದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದವರು ಬಲಿದಾನ ಮಾಡಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ತ್ಯಾಗವಲ್ಲ, ಅಪಘಾತ. ತ್ಯಾಗಕ್ಕೂ ಅಪಘಾತಕ್ಕೂ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಹತ್ಯೆಯ ಸುದ್ದಿ ಕೇಳಿದಾಗ ನಾನು ತುಂಬಾ ದುಃಖಿತನಾಗಿದ್ದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ಗೆ ಆ ನೋವು ಗೊತ್ತಿಲ್ಲ. ಆ ನೋವು ಸೇನೆ ಮತ್ತು ಕಾಶ್ಮೀರಿಗಳಿಗೆ ಮಾತ್ರ ಗೊತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಮಾರೋಪದ ವೇಳೆ ಹೇಳಿದ್ದರು.

Join Whatsapp