ಬಿ.ಎಸ್. ಯಡಿಯೂರಪ್ಪ ಜಾತ್ಯತೀತ ನಾಯಕ: ವಿಜಯೇಂದ್ರ

Prasthutha|

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ವರ್ಗದ, ಜಾತಿಯ ನಾಯಕರಲ್ಲ, ಬದಲಾಗಿ ಅವರು ಜಾತ್ಯತೀತ ನಾಯಕ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

- Advertisement -

ಈ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಅವರು ಎಲ್ಲಾ ವರ್ಗಕ್ಕೂ ಅನುದಾನ ನೀಡಿರುವುದು ಜಾತ್ಯತೀತಯನ್ನು ಸಾಬೀತುಪಡಿಸಿದೆ.
ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ, ರಾಜಕೀಯದಿಂದಲ್ಲ. ಜೊತೆಗೆ ಅವರು ಪ್ರತಿನಿಧಿಸುತಿದ್ದ ಶಿಕಾರಿಪುರ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ವಿಪಕ್ಷಗಳ ಶಾಸಕರು ಕೂಡ ಅನುದಾನ ಕೊಟ್ಟ ಬಗ್ಗೆ ಹೇಳಿಕೊಂಡಿದ್ದಾರೆ. ಪಕ್ಷ ಅಧಿಕಾರಕ್ಕೆ ತರಲು ನಿರಂತರ ಓಡಾಟ ಮಾಡುತ್ತಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದರು.

Join Whatsapp