ವೇದಿಕೆ ಮೇಲೆ ನಿಂತು ಕೈಕಾಲು ಮುರಿಯುವ, ಕೊಲ್ಲುವ ಬೆದರಿಕೆಯೊಡ್ಡಿದ ಬಿಜೆಪಿ ನಾಯಕ!

Prasthutha|

ಕೊಲ್ಕತಾ : ನಿಮ್ಮನ್ನು ನೀವು ತಿದ್ದಿಕೊಳ್ಳಿ, ಇಲ್ಲವಾದಲ್ಲಿ ಕೈ, ಕಾಲು ಮುರಿಯಲಾಗುವುದು, ಹತ್ಯೆಯೂ ನಡೆಯಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ಸಿಎಂ ಮಮತಾ ಬ್ಯಾನರ್ಜಿ ಬೆಂಬಲಿಗರಿಗೆ ಬೆದರಿಕೆಯೊಡ್ಡಿದ್ದಾರೆ. ಅದೂ, ಬಹಿರಂಗ ವೇದಿಕೆಯಲ್ಲೇ ದಿಲೀಪ್ ಘೋಷ್ ಈ ರೀತಿ ಬೆದರಿಕೆಯನ್ನೊಡ್ಡಿದ್ದಾರೆ.

- Advertisement -

“ದೀದಿ(ಮಮತಾ ಬ್ಯಾನರ್ಜಿ)ಯ ಸಹೋದರರು ಇನ್ನು ಆರು ತಿಂಗಳಲ್ಲಿ ನಿಮ್ಮ ಗುಣಗಳನ್ನು ಬದಲಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಕೈ, ಕಾಲು, ಪಕ್ಕೆಲುಬು ಮುರಿಯಲಾಗುವುದು ಮತ್ತು ತಲೆ ಒಡೆಯಲಾಗುವುದು. ನೀವು ಆಸ್ಪತ್ರೆಗೆ ಪ್ರಯಾಣ ಬೆಳೆಸಬೇಕಾದೀತು. ಅದನ್ನೂ ಮೀರಿದರೆ ನೀವು ಸ್ಮಶಾನಕ್ಕೆ ಹೋಗಬೇಕಾಗುತ್ತದೆ’’ ಎಂದು ಘೋಷ್ ಹಲ್ದಿಯಾದಲ್ಲಿ ನಡೆದ ಸಭೆಯೊಂದರಲ್ಲಿ ಬೆದರಿಕೆಯೊಡ್ಡಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಎರಡೇ ದಿನದಲ್ಲಿ ಇಂತಹುದೊಂದು ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಮುಖ್ಯಸ್ಥರು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ.  

Join Whatsapp