ಹಿಂದೂ- ಮುಸ್ಲಿಮರ ನಡುವೆ ಸಂಘರ್ಷ ಉಂಟು ಮಾಡಿದ್ದು ಬ್ರಿಟಿಷರು: ಮೋಹನ್ ಭಾಗವತ್

Prasthutha|

ಮುಂಬೈ: ಹಿಂದೂ ಹಾಗೂ ಮುಸ್ಲಿಮರ ನಡುವೆ ಕಿತ್ತಾಟ ತಂದಿಟ್ಟಿದ್ದೇ ಬ್ರಿಟಿಷರು, ಈ ಮನಸ್ಥಿತಿಯನ್ನು ನಾವು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.


ಹಿಂದೂಗಳಿಗೆ ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಹೇಳಿದ್ದರು ಹಾಗೆ ಮುಸ್ಲಿಮರು ಉಗ್ರಗಾಮಿಗಳು ಎಂದು ಹಿಂದೂಗಳಿಗೆ ಹೇಳಿದ್ದರು. ಈ ಮೂಲಕ ಎರಡೂ ಸಮುದಾಯಗಳಲ್ಲಿ ಸಂಘರ್ಷ ಬೆಳೆಯುವಂತೆ ಮಾಡಿದರು ಎಂದರು.

- Advertisement -


ಆ ಮನಸ್ಥಿತಿಯಲ್ಲೇ ಹೋರಾಟ ಮತ್ತು ನಂಬಿಕೆಯ ಕೊರತೆಯ ಪರಿಣಾಮವಾಗಿ, ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತಾಗಿದೆ. ಈ ಹಿನ್ನೆಲೆ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಭಾಗವತ್ ತಿಳಿಸಿದರು.

- Advertisement -