ಹೊಸದಿಲ್ಲಿ: ಬ್ರಿಟನ್ ನಲ್ಲಿ ಅನುಮೋದಿತ ಕೋವಿಡ್ ಲಸಿಕೆಗಳ ಪಟ್ಟಿಗೆ ಭಾರತದ ಕೋವ್ಯಾಕ್ಸಿನ್ ಅನ್ನು ಸೇರ್ಪಡೆಗೊಳಿಸಲಾಗಿದೆ.
ಇನ್ನು ಮುಂದೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಪಡೆದ ಭಾರತದ ಪ್ರಯಾಣಿಕರು ಬ್ರಿಟನ್ ಗೆ ಬಂದ ನಂತರ ಸ್ವಯಂ-ಪ್ರತ್ಯೇಕವಾಗಬೇಕಾಗಿಲ್ಲ ಎಂದು ವರದಿಯಾಗಿದೆ.
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಭಾರತದ ಪ್ರತಿರಕ್ಷಣೆ ಕಾರ್ಯಕ್ರಮಕ್ಕಾಗಿ ಬಳಸಲಾಗುವ ಎರಡು ಪ್ರಮುಖ ಲಸಿಕೆಗಳಾಗಿವೆ. ರಷ್ಯಾ ನಿರ್ಮಿತ ಸ್ಪುಟ್ನಿಕ್ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್, ಚೀನಾದ ಸಿನೊವಾಕ್ ಮತ್ತು ಸಿನೋಫಾರ್ಮ್ ಅನ್ನು ಬ್ರಿಟನ್ ತನ್ನ ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದೆ.