ತಾಯಂದಿರು ಹಾಲುಣಿಸುವುದು ಮೂಲಭೂತ ಹಕ್ಕು: ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು: ಮಹತ್ವದ ಆದೇಶವೊಂದರಲ್ಲಿ ಕರ್ನಾಟಕ ಹೈಕೋರ್ಟ್ ತಾಯಂದಿರು ಹಾಲುಣಿಸುವುದು ಬೇರ್ಪಡಿಸಲಾಗದ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಆ ಹಕ್ಕನ್ನು ಸಂರಕ್ಷಿಸಲಾಗುವುದೆಂದು ಹೇಳಿದೆ.

- Advertisement -

ಎದೆ ಹಾಲು ಕುಡಿಯುವ ಶಿಶುವಿಗೆ ಅದರ ಮೇಲೆ ಹಕ್ಕಿದೆ ಮತ್ತು ಎದೆಹಾಲು ನೀಡುವ ತಾಯಿಯು ಕೂಡ ಆ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಆದೇಶ ನೀಡಿದರು.

ಮಗುವಿನ ಪಾಲನೆಗಾಗಿ ಹೆತ್ತ ತಾಯಿ ಮತ್ತು ಸಾಕು ತಾಯಿಯ ನಡುವಿನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

- Advertisement -

ವಂಶವಾಹಿ ತಾಯಿಯ ಪರವಾಗಿ ವಕೀಲ ಸಿರಾಜುದ್ದೀನ್ ಅಹ್ಮದ್ ಮತ್ತು ಸಾಕು ತಾಯಿಯ ಪರವಾಗಿ ವಕೀಲ ಎಸ್ ಸುಬ್ರಹ್ಮಣ್ಯ ವಾದಿಸಿದರು.



Join Whatsapp