ಅಸ್ಸಾಮ್ ಗೋಲಿಬಾರ್ ಪ್ರಶ್ನಿಸಿದ ಯುವಕರ ಮೇಲೆ ಉತ್ತರ ಪ್ರದೇಶದಲ್ಲಿ ಮೊಕದ್ದಮೆ

Prasthutha|

ಲಕ್ನೋ: ಅಸ್ಸಾಮ್ ನಲ್ಲಿ ನಡೆದ ಪೊಲೀಸ್ ಫಯರಿಂಗ್ ಪ್ರಶ್ನಿಸಿ ಪ್ರತಿಭಟಿಸಿದ ಅಲಹಾಬಾದಿನ ಫೆಟರ್ನಿಟಿ ಮೂವ್ ಮೆಂಟ್ ಸಂಘಟನೆಯ ಯುವಕರ ಮೇಲೆ ಉತ್ತರ ಪ್ರದೇಶ ಪೊಲೀಸರು ಕೋವಿಡ್ ಸಾಂಕ್ರಾಮಿಕ ನಿಯಮ ಉಲ್ಲಂಘಿಸಿದ ಮೊಕದ್ದಮೆ ದಾಖಲಿಸಿದ್ದಾರೆ.

- Advertisement -

ಅಸ್ಸಾಮ್ ನ ಡರಾಂಗ್ ಜಿಲ್ಲೆಯಲ್ಲಿ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದನ್ನು ಖಂಡಿಸಿ ಅಲಹಾಬಾದಿನಲ್ಲಿ ಮಂಗಳವಾರ ಫೆಟರ್ನಿಟಿ ಮೂವ್ ಮೆಂಟಿನ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಆ ಯುವಕರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಎಫ್ ಎಂ- ಫೆಟರ್ನಿಟಿ ಮೂವ್ ಮೆಂಟಿ ಸದಸ್ಯರು ಪೊಲೀಸರ ನಡೆಯನ್ನು ಖಂಡಿಸಿ, ನಾವು ನಿಯಮ ಪಾಲಿಸಿದ್ದೆವು. ಪೊಲೀಸರೇ ಅದನ್ನು ಮುರಿದರು. ಎಫ್ ಐಆರ್ ದಾಖಲಿಸಿರುವುದನ್ನು ಕೂಡಲೆ ಹಿಂಪಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾವು ದೌರ್ಜನ್ಯಗಳ ವಿರುದ್ಧ ನಮ್ಮ ಧ್ವನಿ ಎತ್ತುತ್ತೇವೆ; ರಾಜ್ಯ ಸರಕಾರ ಪ್ರಾಯೋಜಿತ ಉಗ್ರವಾದವನ್ನು ಖಂಡಿಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಎಫ್ ಐಆರ್ ದಾಖಲಾದ ಎಲ್ಲರ ಬೆನ್ನಿಗೆ ನಿಲ್ಲುವುದಾಗಿಯೂ ಸಂಘಟನೆ ಹೇಳಿದೆ.

- Advertisement -

ಎಫ್ ಎಂನವರ ಪ್ರತಿಭಟನೆಯನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಎಸೋಸಿಯೇಶನ್, ದಿಶಾ ಸ್ಟೂಡೆಂಟ್ಸ್ ಆರ್ಗನೈಜೇಶನ್, ಅದ್ವಿಕ್ತ ಮಂಚ್ ಮೊದಲಾದ ವಿದ್ಯಾರ್ಥಿ ಸಂಘಟನೆಗಳು ಬೆಂಬಲಿಸಿದ್ದವು.
ಅಸ್ಸಾಂನಲ್ಲಿ ಪೊಲೀಸರ ಗೋಲಿಬಾರ್ ನಲ್ಲಿ ನಾಗರಿಕರು ಸತ್ತುದರ ವಿರುದ್ಧ ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಉತ್ತರ ಪ್ರದೇಶವೂ ಅವುಗಳಲ್ಲಿ ಒಂದು.

ಆಲ್ ಅಸ್ಸಾಂ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್, ಜಮಾತ್ ಎ ಉಲೇಮಾ ಮೊದಲಾದವುಗಳನ್ನು ಒಳಗೊಂಡಿರುವ ಆಲ್ ಮೈನಾರಿಟಿ ಆರ್ಗನೈಜೇಶನ್ಸ್ ಕೋ ಆರ್ಡಿನೇಶನ್ ಸಮಿತಿಯು ಡರಾಂಗ್ ಜಿಲ್ಲೆಯಲ್ಲಿ ಶುಕ್ರವಾರ 12 ಗಂಟೆಗಳ ಬಂದ್ ನಡೆಸಿತ್ತು.
ಪತ್ರಿಕಾ ವರದಿಗಳಂತೆ ದೆಹಲಿಯ ಅಸ್ಸಾಂ ಭವನದೆದುರು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆಯಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ ಪ್ರತಿಕೃತಿ ಸುಟ್ಟು ಅಸ್ಸಾಂ ಫಯರಿಂಗಿಗೆ ವಿರೋಧ ವ್ಯಕ್ತಪಡಿಸಿದರು.

Join Whatsapp