ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆಗೆ ಬ್ರೇಕ್: ಸರ್ಕಾರದಿಂದ ಘೋಷಣೆ

Prasthutha|

ನವದೆಹಲಿ: ಏಕಬಳಕೆ ಅಂದರೆ ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್​ ಕಪ್​, ಪ್ಲೇಟ್​ ಹಾಗೂ ಸ್ಟ್ರಾಗಳ ಉತ್ಪಾದನೆಯನ್ನು ಬಂದ್​ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

- Advertisement -

 ಏಕಬಳಕೆಯ ಪ್ಲಾಸ್ಟಿಕ್​ ವಸ್ತುಗಳ ಉಪಯೋಗ ನಿಷೇಧಿಸಿ ಸರ್ಕಾರ ಕ್ರಮಜರುಗಿಸಿದಾಗೆಲ್ಲ ಅವುಗಳ ಉತ್ಪಾದನೆಯನ್ನೇ ಏಕೆ ನಿಷೇಧಿಸಬಾರದು ಎಂದು ಜನರು ಪ್ರಶ್ನಿಸುತ್ತಿದ್ದರು. ಈ ನಿಟ್ಟಿನಲ್ಲಿ ಭಾರತವನ್ನು ಏಕಬಳಕೆಯ ಪ್ಲಾಸ್ಟಿಕ್​ ಉತ್ಪನ್ನಗಳಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು,

ಈ ವರ್ಗಕ್ಕೆ ಸೇರುವ ಪ್ಲಾಸ್ಟಿಕ್ ಕಡ್ಡಿಗಳಿಂದ ಕಿವಿ ಮೊಗ್ಗುಗಳು, ಬಲೂನುಗಳಿಗೆ ಪ್ಲಾಸ್ಟಿಕ್ ತುಂಡುಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್ ಕ್ರೀಮ್ ಸ್ಟಿಕ್‌ಗಳು ಸ್ಟ್ರಾ, ಕಪ್​, ಪ್ಲೇಟ್​, ಟ್ರೇ, ಪಾಲಿಸ್ಟಿರೀನ್​ ಮುಂತಾದವುಗಳ ಉತ್ಪಾದನೆಯನ್ನೇ ನಿಲ್ಲಿಸಲಿದೆ.

- Advertisement -

ಖರೀದಿ ಬಳಿಕ ಒಮ್ಮೆ ಮಾತ್ರ ಬಳಸಿ ವರ್ಜಿಸುವ ಪ್ಲಾಸ್ಟಿಕ್​ ಉತ್ಪನ್ನಗಳನ್ನು ಏಕಬಳಕೆ ಉತ್ಪನ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, ಈ ನಿಯಮವು  2022ರ ಜುಲೈ 1ರಿಂದ ನಿಷೇಧ ಜಾರಿಗೆ ಬರಲಿದೆ ಎಂಬುದನ್ನೂ ತಿಳಿಸಿದೆ.

Join Whatsapp