ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಜಾರಿಯಾಗಿದ್ದು, ಫಲಾನುಭವಿಗಳು ಕೂಡ ಅದರ ಉಪಯೋಗವನ್ನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಬಿಪಿಎಲ್ ಫಲಾನುಭವಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ. ಬಿಪಿಎಲ್ ಕಾರ್ಡ್ನಲ್ಲಿ ಮುಖ್ಯಸ್ಥರು ಪುರುಷರಾಗಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಸ್ಕೀಂ ಲಾಭಪಡೆಯಲಾಗಲ್ಲ.
ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಸ್ಕೀಮ್ಗಳ ಪೈಕಿ ಈಗಾಗಲೇ ನಾಲ್ಕು ಸ್ಕೀಮ್ಗಳಿಗೆ ಚಾಲನೆ ಸಿಕ್ಕಿದೆ. ಜನರು ಕೂಡ ಅವುಗಳ ಲಾಭ ಪಡೆಯುತ್ತಿದ್ದಾರೆ. ಆದರೆ ಮೊನ್ನೆಯಷ್ಟೇ ಜಾರಿಯಾದ ಗೃಹಲಕ್ಷ್ಮಿ ಯೋಜನೆಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಬಿಪಿಎಲ್ ಕಾರ್ಡ್ನಲ್ಲಿ ಪುರುಷರು ಮುಖ್ಯಸ್ಥರಿದ್ದವರಿಗೆ ಗೃಹ ಲಕ್ಷ್ಮಿ ಸ್ಕೀಮ್ ಹಾಗೂ ಅನ್ನಭಾಗ್ಯ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಬಿಪಿಎಲ್ ಕಾರ್ಡ್ಗಳ ಹೆಡ್ ಆಫ್ ದಿ ಪ್ಯಾಮಿಲಿ ಪುರುಷರೇ ಆಗಿದ್ದರೇ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಸ್ಕೀಮ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸಧ್ಯ ಕಾರ್ಡ್ ನಲ್ಲಿ 18 ವರ್ಷದ ಒಳಗಿದ್ದ ಬಾಲಕಿಯರು ಇದ್ರೆ ತೊಂದರೆ ಇಲ್ಲ. ಆದರೆ ವಯಸ್ಕ ಮಹಿಳೆ ಇದ್ದೂ ಕಾರ್ಡ್ ಮುಖ್ಯಸ್ಥ ಗಂಡಸರಾಗಿದ್ದರೆ ಅನ್ನಭಾಗ್ಯ ಸ್ಕೀಂ ಸಿಗುವುದಿಲ್ವಂತೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಿಪಿಎಲ್, ಎಪಿಎಲ್ ಕಾರ್ಡ್ ಮನೆಯೊಡತಿಯೇ ಇರಬೇಕು. ಇಲ್ಲದಿದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಎರಡೂ ಸ್ಕೀಂಗೂ ಅನರ್ಹರಾಗಿರುತ್ತಾರಂತೆ. ಯಾಕಂದ್ರೆ ಈ ಎರಡು ಯೋಜನೆಗಳು ಮಹಿಳೆಯರಿಗೆ ಹೆಚ್ಚು ಪ್ರಧಾನ್ಯತೆಯನ್ನ ನೀಡುತ್ತಿರುವುದುರಿಂದ ಜೊತೆಗೆ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮಾಹಿತಿಯನ್ನ ಆಧಾರಿಸಿ ಈ ನಿಯಮವನ್ನ ಕಡ್ಡಾಯ ಮಾಡಲಾಗಿದೆ. ಸದ್ಯ ಆಹಾರ ಇಲಾಖೆಯ ಪ್ರಕಾರ ಈಗಿರುವ ಬಿಸಿಎಲ್ ಕಾರ್ಡ್ ದಾರರ ಪೈಕಿ ಆರು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇರುವುದು ಕಂಡುಬಂದಿದೆ.
ಬಿಪಿಎಲ್ ಕಾರ್ಡ್ನಲ್ಲಿ ಮನೆಯೊಡತಿ ಹೆಸರು ಬದಲಾಯಿಸಲು 10 ದಿನ ಅವಕಾಶ
ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಇದ್ದೂ ಪುರುಷ ಮುಖ್ಯಸ್ಥ ಇರೋ ಕಾರ್ಡ್ ನಿಂದ ಅರ್ಜಿ ಸಲ್ಲಿಸಿದ್ರೆ ಅರ್ಜಿ ಸ್ವೀಕಾರವಾಗುತ್ತಿಲ್ಲ. ಜೊತೆಗೆ ಆಂತಹ ಬಿಪಿಎಲ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿಯ ಎರಡು ಸಾವಿರ ದುಡ್ಡು ಕೂಡ ಸಿಗೋದಿಲ್ಲ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಲು ಆಹಾರ ಇಲಾಖೆ ಸಮಯ ನಿಗದಿ ಮಾಡಿದೆ. ಮನೆಯೊಡತಿ ಹೆಸರು ಬದಲಾವಣೆಗೆ ಸೆ. 1ರಿಂದ 10ರವರೆಗೆ ಅವಕಾಶ ನೀಡಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.