ಕೊಳವೆ ಬಾವಿಗೆ ಬಿದ್ದು ಬಾಲಕ ಸಾವು: ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲು

Prasthutha|

ಭೋಪಾಲ್: ಮಧ್ಯಪ್ರದೇಶದಲ್ಲಿ ಎಂಟು ವರ್ಷದ ಬಾಲಕನೊಬ್ಬ ತೆರೆದ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ತೋಟದ ಮಾಲೀಕನನ್ನು ನಾನಕ್ರಾಮ್ ಚೌಹಾಣ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಮಾಂಡ್ವಿ ಗ್ರಾಮದಲ್ಲಿ ಡಿಸೆಂಬರ್ 6 ರಂದು ಆಟವಾಡುತ್ತಿದ್ದಾಗ ತನ್ಮಯ್ ಎಂಬ ಬಾಲಕ ಜಮೀನಿನಲ್ಲಿ ಕೊರೆದ 400 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ. 82 ಗಂಟೆಗಳ ಕಾಲ ನಡೆದ  ನಿರಂತರ ರಕ್ಷಣಾ ಕಾರ್ಯಾಚರಣೆಯ ನಂತರವೂ  ಬಾಲಕ ಸಾವನ್ನಪ್ಪಿದ್ದ.

ನಾನಕ್ರಾಮ್  ಕೆಲವು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದರು. ಅದರಲ್ಲಿ ನೀರು ಸಿಗದಿದ್ದರೂ,  ಅದನ್ನು ಮುಚ್ಚದೆ ಹಾಗೆ ಬಿಟ್ಟಿದ್ದ. ಇದು ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಶಿವಚರಣ್ ಬೋಹಿತ್ ತಿಳಿಸಿದ್ದಾರೆ.

- Advertisement -

“ತನಿಖೆಯ ನಂತರ, ನಾನಕ್ರಾಮ್ ವಿರುದ್ಧ ಐಪಿಸಿಯ ಸೆಕ್ಷನ್ 304 (ಕೊಲೆಗೆ ಸಮವಲ್ಲದ ಅಪರಾಧಿ ನರಹತ್ಯೆ) ಅಡಿಯಲ್ಲಿ ಆತ್ನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ನಾವು ಆರೋಪಿಯನ್ನು ಬಂಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Join Whatsapp