ಡಾಮೋನ್ ಗಾಲ್ಗಟ್ ಬರೆದ “ದಿ ಪ್ರಾಮೀಸ್” ಕಾದಂಬರಿಗೆ ಬೂಕರ್ ಪ್ರಶಸ್ತಿ

Prasthutha|

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಡಾಮೋನ್ ಗಾಲ್ಗಟ್ ಅವರು ಬರೆದ ‘ದಿ ಪ್ರಾಮಿಸ್’ ಕಾದಂಬರಿಯು ಈ ಬಾರಿಯ ಬೂಕರ್ ಪ್ರಶಸ್ತಿಗೆ ಬಾಜನವಾಗಿದೆ. ದಕ್ಷಿಣ ಆಫ್ರಿಕಾದಿಂದ ಬೂಕರ್ ಗೆದ್ದ ಮೂರನೆಯ ವ್ಯಕ್ತಿಯಾಗಿದ್ದಾರೆ ಗಾಲ್ಗಟ್. ಈ ಪ್ರಶಸ್ತಿಯು 50,000 ಪೌಂಡು ಎಂದರೆ 50,00,000 ರೂಪಾಯಿ ನಗದು ಬಹುಮಾನವನ್ನು ಹೊಂದಿದೆ.

- Advertisement -


ಸಲೋಮ್ ಎಂಬ ಕರಿಯ ಮನೆಗೆಲಸದಾಕೆಗೆ ಬಿಳಿ ವರ್ಣದ ಮಾಲೀಕ ಕುಟುಂಬವು ಅಲ್ಲಿನ ಜಾಗದ ಸಹಿತ ಆಕೆ ವಾಸ ಇರುವ ಮನೆಯನ್ನು ಮುಂದೆ ಬರೆದು ಕೊಡುವುದಾಗಿ ಆಶ್ವಾಸನೆ ನೀಡಿರುತ್ತದೆ.
ಸ್ವಾರ್ತ್ ಕುಟುಂಬವು ಹಂಚಿ ಹೋಗುತ್ತದೆ; ಕರಿಯ ಮಹಿಳೆಗೆ ನೀಡಿದ ಆಶ್ವಾಸನೆ ಈಡೇರುವುದಿಲ್ಲ. ಒಂದು ವಿಶೇಷ ಸನ್ನಿವೇಶದಲ್ಲಿ ಮೂವರು ಒಡಹುಟ್ಟಿದವರು ಒಂದಾಗುತ್ತಾರೆ ಎಂದು ಈ ಕಾದಂಬರಿಯು ನಾಲ್ಕು ದಶಕದ ಕತೆಯನ್ನು ಹೊಂದಿದೆ.

ದ ಪ್ರಾಮಿಸ್ ಇದು ಗಾಲ್ಗಟ್ ರ ಒಂಬತ್ತನೆಯ ಕಾದಂಬರಿಯಾಗಿದೆ. ಎಂಟನೆಯ ಕಾದಂಬರಿಯ ಒಂಬತ್ತು ವರುಷಗಳ ಬಳಿಕ ಇದನ್ನು ಹೊರಲಾಗಿದೆ. ಕಾದಂಬರಿಯಲ್ಲಿ ಬಂದ ಪಾತ್ರಗಳು ನಾನು ಬೆಳೆದ ವಾತಾವರಣದಲ್ಲಿಯೇ ಕಂಡುದಾಗಿದೆ ಎಂದು ಲೇಖಕರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

- Advertisement -


“ನಾನು ಪ್ರಿಟೋರಿಯಾದಲ್ಲಿ ಬೆಳೆಯುವಾಗ ಸ್ವಾರ್ತ್ ಕುಟುಂಬದಂಥ ಸಮ್ಮಿಲನಗಳನ್ನು ನೋಡಿದ್ದೇನೆ. ಅವರು ಬ್ರಿಟಿಷ್ ಮತ್ತು ಆಫ್ರಿಕಾ ಸಂಕರರಾಗಿದ್ದು ಅವರ ಆಚಾರ ವಿಚಾರಗಳಲ್ಲಿಯೂ ಆ ಸಮ್ಮಿಶ್ರಣ ಇತ್ತು. ಇದು ವಸಾಹತುಶಾಹಿ ಪ್ರದೇಶಗಳಲ್ಲಿ ಅಪರೂಪವಲ್ಲ. ಆದರೆ ಅವರು ಈಗ ಯಾವ ರೀತಿಯ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಕತೆಯ ತಿರುಳು. ಕಾದಂಬರಿಯಲ್ಲಿ ನಾಲ್ಕು ಶವ ಯಾತ್ರೆಗಳು ನಡೆಯುತ್ತವೆ; ನಾಲ್ಕೂ ದಶಕಗಳ ಅಂತರದಲ್ಲಿ ನಾಲ್ಕು ದಶಕಗಳಲ್ಲಿ ನಡೆಯುತ್ತದೆ. ಹೆಚ್ಚಿನ ಸನ್ನಿವೇಶಗಳು ಬದುಕಿನ ಬದಲಾವಣೆ ಮತ್ತು ದೇಶವೂ ಬದಲಾವಣೆ ಕಾಣುತ್ತಿರುವುದರ ಮೇಲೆ ನಿಂತಿದೆ” ಎಂದು ಗಾಲ್ಗಟ್ ಹೇಳುತ್ತಾರೆ.


ಗಾಲ್ಗಟ್ ರ ಕಾದಂಬರಿಗಳು 2003, 2010ರಲ್ಲೂ ಬೂಕರ್ ಪಟ್ಟಿಯಲ್ಲಿ ಇದ್ದವು. ಆಗ ಸಿಗದ್ದು ಈ ಬಾರಿ ಸಿಕ್ಕಿದೆ.

Join Whatsapp