ಮಾಧ್ಯಮಗಳು ತಮ್ಮ ಗಡಿ ದಾಟಬಾರದು : ಬಾಂಬೆ ಹೈಕೋರ್ಟ್

Prasthutha|

ಮುಂಬೈ : ಮಾಧ್ಯಮಗಳು ತಮ್ಮ ಗಡಿಯನ್ನು ಮೀರಬಾರದು ಎಂದು ನಾವು ಬಯಸಿದ್ದೇವೆ, ಅದೇ ರೀತಿ ನಾವೂ ನಮ್ಮ ಗಡಿಯಲ್ಲೇ ಇರಲು ಬಯಸಿದ್ದೇವೆ ಎಂದು ಬಾಂಬೆ ಹೈಕೋರ್ಟ್ ಇಂದು ಮಾಧ್ಯಮಗಳಿಗೆ ಕಠಿಣ ಸಂದೇಶ ರವಾನಿಸಿದೆ.

- Advertisement -

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಮಾದರಿಯ ಮಾಧ್ಯಮಗಳು ವರದಿಗಳನ್ನು ಮಾಡುವಾಗ ಸಂಯಮದಿಂದಿರುವಂತೆ ನಿರ್ದೇಶಿಸಲು ಕೋರಲಾದ ಪಿಐಎಲ್ ಗಳ ವಿಚಾರಣೆಯ ವೇಳೆ ಸಿಜೆ ದೀಪಾಂಕರ್ ದತ್ತಾ ಮತ್ತು ನ್ಯಾ. ಜಿ.ಎಸ್. ಕುಲಕರ್ಣಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ.6ರೊಳಗೆ ಈ ಸಂಬಂಧ ವಿವರಣೆ ನೀಡುವಂತೆ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳ ವರದಿಗಳಿಂದಾಗಿ ತನಿಖೆಗೆ ಅಡ್ಡಿಯಾಗುತ್ತಿದೆಯೇ? ಮಾಧ್ಯಮ ವರದಿಗಾರಿಕೆ ಬಗ್ಗೆ ಮಾರ್ಗಸೂಚಿ ಜಾರಿಗೊಳಿಸಬೇಕೇ ಎಂದು ವಿವರ ನೀಡುವಂತೆ ಅದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

- Advertisement -

ಲೆಕ್ಕಕ್ಕಿಂತ ಹೆಚ್ಚಿನ ವರದಿಗಾರಿಕೆಯು ಆರೋಪಿಯು ನಿಜಕ್ಕೂ ತಪ್ಪಿತಸ್ಥನಾಗಿದ್ದರೆ, ಆತ ಸಾಕ್ಷ್ಯಗಳ ನಾಶಕ್ಕೆ ಅಥವಾ ಪರಾರಿಯಾಗಲು ಯತ್ನಿಸಬಹುದು. ಅತವಾ ಒಂದು ವೇಳೆ ಆರೋಪಿಯು ನಿಜಕ್ಕೂ ಅಮಾಯಕನಾಗಿದ್ದರೆ, ಆತನ ಯಾವುದೇ ತಪ್ಪಿಲ್ಲದಿದ್ದರೆ, ಆತನ ಘನತೆಗೆ ಧಕ್ಕೆಯುಂಟಾಗುವುದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ನ.6ಕ್ಕೆ ವಿಚಾರಣೆ ಮುಂದೂಡಲಾಗಿದೆ.



Join Whatsapp