ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ| ಆರೋಪಿ ಹನುಮಂತಪ್ಪ ಬಂಧನ

Prasthutha|

ಭಟ್ಕಳ: ಭಟ್ಕಳ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

- Advertisement -

ಆರೋಪಿ ಹನುಮಂತಪ್ಪ ಠಾಣೆಯಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿದ್ದ.  

ತನ್ನ ಹೆಸರು ಹಾಗೂ ವಿಳಾಸವನ್ನು ಬರೆಯದೆ ಪೋಸ್ಟ್ ಕಾರ್ಡ್ ನ ಮುಖಪುಟದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಚಿಹ್ನೆ, ಅದರ ಕೆಳಗೆ 786 ಮತ್ತು ಉರ್ದು ಅಕ್ಷರಗಳನ್ನು ಬರೆದು  ಅದರ ಕೆಳಗೆ ಭಟ್ಕಳ ಉತ್ತರಕನ್ನಡ ಎಂದು ನಮೂದಿಸಿ ಆರೋಪಿ ಪತ್ರವೊಂದನ್ನು ಕಳುಹಿಸಿದ್ದ ಎನ್ನಲಾಗಿದೆ.

- Advertisement -

ಬಾಂಬ್ ಸ್ಫೋಟಿಸುವ ಬಗ್ಗೆ ಭಟ್ಕಳ ಠಾಣೆಗೆ ಬಂದ ಅನಾಮಧೇಯ ಪತ್ರವನ್ನು ಪರಿಶೀಲಿಸಿದ ಭಟ್ಕಳದ ಪೊಲೀಸ್ ವೃತ್ತಾಧಿಕಾರಿ ದಿವಾಕರ್ ಪಿ.ಎಂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.  

Join Whatsapp