ಕಂಡಕ್ಟರ್/ ಡ್ರೈವರ್ ಹುದ್ದೆಯ ದೇಹದಾರ್ಢ್ಯ ಪರೀಕ್ಷೆ; ಕಾಲು, ಸೊಂಟಕ್ಕೆ ಕಬ್ಬಿಣದ ಕಲ್ಲು ಕಟ್ಟಿಕೊಂಡು ಬಂದ ಅಭ್ಯರ್ಥಿಗಳು

Prasthutha|

ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ /ಡ್ರೈವರ್ ಹುದ್ದೆ ಪಡೆಯಲು ಅಭ್ಯರ್ಥಿಗಳು ದೇಹಕ್ಕೆ ಕಬ್ಬಿಣದ ಕಲ್ಲು, ಸರಪಳಿ ಕಟ್ಟಿಕೊಳ್ಳುವ ಮೂಲಕ ತೂಕ ಹೆಚ್ಚಿಸಿಕೊಂಡು ಪರೀಕ್ಷೆಗೆ ಹಾಜರಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

- Advertisement -


ಚಾಲಕ/ ನಿರ್ವಾಹಕ ಹುದ್ದೆಗೆ 163 ಸೆಂಟಿ ಮೀಟರ್ ಎತ್ತರ ಮತ್ತು 55 ಕೆಜಿ ತೂಕ ಹೊಂದಿರಬೇಕು. ಆದರೆ ಕಡಿಮೆ ತೂಕ ಹೊಂದಿದ್ದ ನಾಲ್ವರು ಅಭ್ಯರ್ಥಿಗಳು ಒಳ ಉಡುಪಿನಲ್ಲಿ 5 ಕೆಜಿ ತೂಕದ ಕಲ್ಲು, ಸೊಂಟ ಹಾಗೂ ಕಾಲಿಗೆ ಕಬ್ಬಿಣದ ಪಟ್ಟಿ, ಕಬ್ಬಿಣದ ಕಲ್ಲುಗಳನ್ನು ಕಟ್ಟಿಕೊಂಡು ದೇಹದಾರ್ಢ್ಯ ಪರೀಕ್ಷೆಗೆ ಹಾಜರಾಗಿ ಸಿಕ್ಕಿ ಬಿದ್ದಿದ್ದಾರೆ. ಅಭ್ಯರ್ಥಿಗಳ ಅಭ್ಯಾಸ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ಶಾಕ್ ಆಗಿದ್ದಾರೆ.


ದೇಹದಾರ್ಢ್ಯ ಪರೀಕ್ಷೆ ವೇಳೆ ಸಾರಿಗೆ ಸಿಬ್ಬಂದಿ ಪರಿಶೀಲಿಸಿದಾಗ ನಾಲ್ವರು ಅಭ್ಯರ್ಥಿಗಳ ಕಳ್ಳಾಟ ಬಯಲಾಗಿದ್ದು, ನಾಲ್ವರು ಅಭ್ಯರ್ಥಿಗಳನ್ನು ಕೈಬಿಡಲಾಗಿದೆ.

Join Whatsapp