ಸೌದಿಯಲ್ಲಿ ಮೃತಪಟ್ಟ ಉಳ್ಳಾಲ ನಿವಾಸಿ ರೊನಾಲ್ಡ್ ಡಿಸೋಜಾ ಮೃತದೇಹ ಊರಿಗೆ ರವಾನೆ

Prasthutha|

ಇತ್ತೀಚೆಗೆ ಸೌದಿ ಅರೇಬಿಯಾದ ಜಿಝಾನ್ ಎಂಬಲ್ಲಿ ಹ್ರದಯಾಘಾತದಿಂದ ಮೃತಪಟ್ಟ ಉಳ್ಳಾಲ ಪೆರ್ಮಣ್ಣೂರು,ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ ಅವರ ಮೃತದೇಹವು ಇಂದು (08-06-2021) ಬೆಂಗಳೂರು ವಿಮಾನ ನಿಲ್ದಾಣ ಕ್ಕೆ ತಲುಪಲಿದೆ.

ನಾಳೆ ಬೆಳಿಗ್ಗೆ 7.30ಕ್ಕೆ ಅವರ ನಿವಾಸಕ್ಕೆ ತಲುಪಲಿರುವ ಮೃತದೇಹವು ಕುಟುಂಬದ ಆಪ್ತರು ಹಾಗೂ ಸೀಮಿತ ಜನರಿಂದ ಮಾತ್ರ ಅಂತಿಮದರ್ಶನ ನಡೆಯಲಿದ್ದು ತದ ನಂತರ ಬೆಳಿಗ್ಗೆ 9 ಕ್ಕೆ ಸರಿಯಾಗಿ ತೊಕ್ಕೊಟ್ಟು ನಿತ್ಯಾದರ್ ಚರ್ಚ್ ನಲ್ಲಿ ಅಂತಿಮ ಕ್ರಿಯೆಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

- Advertisement -

 ರೊನಾಲ್ಡ್ ಡಿಸೋಜರ ಮೃತದೇಹವನ್ನು ಊರಿಗೆ ತಲುಪಿಸಲು ನಿರಂತರ ಶ್ರಮಿಸಿದ ಇಂಡಿಯನ್ ಸೋಶಿಯಲ್ ಫೋರಂ (ISF) ಅಸೀರ್ ವಲಯ ಸಂಚಾಲಕರಾದ ಸಲೀಮ್ ಗುರುವಾಯನಕೆರೆ ಹಾಗೂ ಅಸೀರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷರಾದ ಹನೀಫ್ ಮಂಜೇಶ್ವರವರಿಗೆ ಮೃತರ ಬಾವ ವಿಜಯ್ ಮೊಂತೇರೋರವರು ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -