ಸಿಎನ್‌ಎನ್‌, ದಿ ಗಾರ್ಡಿಯನ್‌ ಸಹಿತ ಹಲವು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವೆಬ್‌ ವಾಹಿನಿಗಳ ಸರ್ವರ್‌ ಡೌನ್

Prasthutha|

ನವದೆಹಲಿ : ಸಿಎನ್‌ಎನ್‌ ಇಂಟರ್‌ನ್ಯಾಶನಲ್‌, ದಿ ನ್ಯೂಯಾರ್ಕ್‌ ಟೈಮ್ಸ್‌, ದಿ ಗಾರ್ಡಿಯನ್ಸ್‌ ಮತ್ತು ಹಲವು ವಿ‌ದೇಶಿ ಮಾಧ್ಯಮ ಸಂಸ್ಥೆಗಳ ಹಲವಾರು ಸುದ್ದಿ ವೆಬ್‌ ತಾಣಗಳ ಸರ್ವರ್‌ ಡೌನ್  ಆಗಿದ್ದು, ಭಾರತದಲ್ಲಿ ಈ ‌ವೆಬ್‌ ಸೈಟ್‌ ಗಳು ಓಪನ್ ಆಗುತ್ತಿಲ್ಲ ಎಂದು ವರದಿಯಾಗಿದೆ. ಇಂಟರ್ನೆಟ್‌ ನಲ್ಲಿ ದೋಷ ಉಂಟಾದ ಕಾರಣ ಈ ಸಮಸ್ಯೆ ಉದ್ಭವವಾಗಿದೆ.

- Advertisement -

ದಿ ಫೈನಾನ್ಸಿಯಲ್‌ ಟೈಮ್ಸ್‌, ವಾಲ್‌ ಸ್ಟ್ರೀಟ್‌ ಜರ್ನಲ್‌, ಬಿಬಿಸಿ, ಟೈಮ್‌ ಮ್ಯಾಗಜಿನ್‌ ಮತ್ತು ಇತರ ಜಾಗತಿಕ ವೆಬ್‌ ಸೈಟ್‌ ಗಳು ಸಹ ತೆರೆಯುವಾಗ ದೋಷವನ್ನು ತೋರಿಸುತ್ತಿದ್ದವು.

ಆನ್‌ ಲೈನ್‌ ವಹಿವಾಟಿನ ಪ್ರಮುಖ ವೆಬ್‌ ಸೈಟ್‌ ಅಮೆಜಾನ್‌, ರೆಡ್ಡಿಟ್‌ ಮತ್ತು ಯುಕೆ ಸರ್ಕಾರಿ ವೆಬ್‌ ಸೈಟ್‌ ಗಳೂ ಸ್ಥಗಿತವನ್ನು ಅನುಭವಿಸಿದವು ಎಂದು ವರದಿಗಳು ತಿಳಿಸಿವೆ.

Join Whatsapp