SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

Prasthutha|

- Advertisement -

ಬೆಂಗಳೂರು : ಕರ್ನಾಟಕದಲ್ಲಿ ಪ್ರಸ್ತುತ ಕೊರೋನಾ ಹಾಗೂ ಒಮಿಕ್ರಾನ್ ತಾಂಡವವಾಡುತ್ತಿರುವ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ(10ನೇ ತರಗತಿ) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಂದು 2021-22ನೇ ಸಾಲಿನ 10ನೇ ತರಗತಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳು ನಡೆಯಲಿವೆ.ಈ ವೇಳಾಪಟ್ಟಿಗೆ ಅಭ್ಯರ್ಥಿಗಳು, ಪೋಷಕರು ಆಕ್ಷೇಪಣೆಯನ್ನು ದಿನಾಂಕ 06-01-2022ರಿಂದ 14-01-2022ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

- Advertisement -

ವೇಳಾಪಟ್ಟಿ ಈ ಕೆಳಗಿನಂತಿದೆ
ಮಾರ್ಚ್ 28 – ಕನ್ನಡ
ಮಾರ್ಚ್ 30 – ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ
ಏಪ್ರಿಲ್ 1 – ಅರ್ಥಶಾಸ್ತ್ರ
ಏಪ್ರಿಲ್‌ 4 – ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6 – ಸಮಾಜ‌ ವಿಜ್ಞಾನ
ಏಪ್ರಿಲ್ 8 – ತೃತೀಯ ಭಾಷೆ ಹಿಂದಿ
ಏಪ್ರಿಲ್ 11 – ವಿಜ್ಞಾನ

Join Whatsapp